Home ಕರಾವಳಿ ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ’ ನಾಮಕರಣಕ್ಕೆ ಸರ್ಕಾರ ಆದೇಶ

ಶ್ರೀ ಮಂಗಳಾದೇವಿ ದೇವಸ್ಥಾನ ರಸ್ತೆ’ ನಾಮಕರಣಕ್ಕೆ ಸರ್ಕಾರ ಆದೇಶ

0

ಮಂಗಳಾದೇವಿ: ಎ.ಬಿ.ಶೆಟ್ಟಿ ವೃತ್ತದಿಂದ ಪಾಂಡೇಶ್ವರ, ಮಂಕಿ ಸ್ಟ್ಯಾಂಡ್ ಮತ್ತು ಮಂಗಳಾದೇವಿ ದೇವಾಲಯ ಮೂಲಕ ಮಾರ್ನಮಿಕಟ್ಟೆ ಫಸ್ಟ್ ಬ್ರಿಡ್ಜ್ ರಸ್ತೆವರೆಗೆ 2.3 ಕಿಮೀ ಉದ್ದದ ಮಾರ್ಗವನ್ನು ‘ಶ್ರೀ ಮಂಗಳಾದೇವಿ ದೇವಸ್ಥಾನದ ರಸ್ತೆ’ ಎಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

2021ರ ಡಿಸೆಂಬರ್‌ ನಲ್ಲಿ ನಡೆದ ನಿಯಮಿತ ಪುರಸಭೆಯ ಸಭೆಯಲ್ಲಿ ಮರು ನಾಮಕರಣದ ಪ್ರಸ್ತಾಪವನ್ನು ಅನುಮೋದಿಸಲಾಯಿತು ಮತ್ತು ಅದನ್ನು ಜನವರಿಯಲ್ಲಿ ಸರ್ಕಾರಕ್ಕೆ ಕಳುಹಿಸಲಾಯಿತು. ರಸ್ತೆಯನ್ನು ‘ಶ್ರೀ ಮಂಗಳಾದೇವಿ ದೇವಸ್ಥಾನದ ರಸ್ತೆ’ ಎಂದು ಮರುನಾಮಕರಣ ಮಾಡುವಂತೆ ಈಗ ನಗರಾಭಿವೃದ್ಧಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮತ್ತು ಮಂಗಳೂರು ಪುರಸಭೆಯ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ.

ಶತಮಾನದಷ್ಟು ಹಳೆಯದಾದ ಮಂಗಳಾದೇವಿ ದೇವಸ್ಥಾನ ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ. ಮಂಗಳಾದೇವಿ ದೇವಾಲಯದಿಂದ ನಗರಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (ಎಎಸ್‌ಐ) ಸಂರಕ್ಷಿಸಲಾಗುತ್ತಿರುವ ಈ ದೇವಾಲಯಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ರಸ್ತೆಗೆ ದೇವಸ್ಥಾನದ ಹೆಸರಿಡಲು ಪಾಲಿಕೆ ಈ ಹಿಂದೆ ತೀರ್ಮಾನಿಸಿತ್ತು.

ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಎ.ಬಿ.ಶೆಟ್ಟಿ ವೃತ್ತದಿಂದ ಪಾಂಡೇಶ್ವರ ಮೂಲಕ ಮಾರ್ನಮಿಕಟ್ಟೆ ಫಸ್ಟ್ ಬ್ರಿಡ್ಜ್ ರಸ್ತೆ ವರೆಗೆ ‘ಶ್ರೀ ಮಂಗಳಾದೇವಿ ದೇವಸ್ಥಾನದ ರಸ್ತೆ’ ಎಂದು ನಾಮಕರಣ ಆಗಿರುವ ಬಗ್ಗೆ ಸರ್ಕಾರದ ಅಧಿಕೃತ ಆದೇಶ ಬಂದಿದೆ. ಈ ಆದೇಶದ ಮೂಲಕ ಆ ಮಾರ್ಗದಲ್ಲಿರುವ ಮಾಲ್, ವಾಣಿಜ್ಯ ಮಳಿಗೆ, ಅಂಗಡಿ, ಸರಕಾರಿ ಕಟ್ಟಡಗಳು ಸೇರಿದಂತೆ ಮಾರ್ಗದ ಉದ್ದಕ್ಕೂ ಇರುವ ಎಲ್ಲಾ ಅಧಿಕೃತ ವಹಿವಾಟುಗಳಿಗೆ ಈ ಹೆಸರನ್ನು ಬಳಸಲು ಅನುಮತಿ ನೀದಿದೆ.

ರಸ್ತೆಯ ಉದ್ದಕ್ಕೂ ಸೂಚನಾ ಫಲಕಗಳನ್ನು ಅಳವಡಿಸಲು ಪುರಸಭೆಯು ಕ್ರಮಗಳನ್ನು ಕೈಗೊಂಡಿದೆ. ನಾನು ಮೇಯರ್ ಆಗಿದ್ದ ಸಮಯದಲ್ಲಿ, ಈ ಪ್ರಸ್ತಾಪಕ್ಕೆ ಪುರಸಭೆಯ ಸಾಮಾನ್ಯ ಸಭೆಯಿಂದ ಅನುಮೋದನೆ ಪಡೆದಿದ್ದೆ ಮತ್ತು ಅದನ್ನು ಸರ್ಕಾರಕ್ಕೆ ಕಳುಹಿಸಿದ್ದೆ, ಈಗ ಅದಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here