ಬೆಂಗಳೂರು: , ಗೃಹಲಕ್ಷ್ಮೀ ಯೋಜನೆ ಹಣವನ್ನು ಫಲಾನುಭವಿಗಳಿಗೆ ಪ್ರತಿ ತಿಂಗಳ 20 ತಾರೀಖಿನೊಳಗೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದೆ. ಈ ನಡುವೆ ತಾಂತ್ರಿಕ ಸಮಸ್ಯೆಯೆಂದು ಪರಿಶೀಲಿಸಲು ಅಂಗನವಾಡಿ ಕಾರ್ಯಕರ್ತೆಯರು ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ನಿಮ್ಮ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.
ಇದಲ್ಲದೇ ಎಲ್ಲಾ ಫಲಾನುಭವಿಗಳಿಗೆ ಕೇಂದ್ರ ಕಚೇರಿಯಿಂದಲೇ ಯೋಜನೆ ಹಣ ಬಿಡುಗಡೆಗೆ ಮುಂದಾಗಿದೆ.
ಸುಮಾರು 5-6 ಲಕ್ಷದಷ್ಟು ಗೃಹಲಕ್ಷ್ಮಿ ದುಡ್ಡು ಜಮೆಯಾಗದ ಯಜಮಾನಿಯರ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹಿಸಿ, ಅವರಿಗೆ ಹಣ ತಲುಪಲು ಕ್ರಮ ವಹಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ತರಿಸಿಕೊಂಡು, ಬಳಿಕ ಅದಾಲತ್ ಮೂಲಕ ದುಡ್ಡು ಜಮೆಯಾಗುವಂತೆ ಇಲಾಖೆ ನೋಡಿಕೊಳ್ಳಲಿದೆ. ಗೃಹಲಕ್ಷ್ಮೀ ಯೋಜನೆ ಹಣವನ್ನು ಫಲಾನುಭವಿಗಳಿಗೆ ಪ್ರತಿ ತಿಂಗಳ 20 ತಾರೀಖಿನೊಳಗೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದೆ. 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕರ್ನಾಟಕ ಕಾಂಗ್ರೆಸ್‌ನ ‘ಗೃಹ ಲಕ್ಷ್ಮಿ’ ಯೋಜನೆಯ ಮೊದಲ ಕಂತನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಆರೋಪಿಸಲಾಗಿದೆ, ಇದು ಮಹಿಳಾ ಮನೆಯ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಭರವಸೆ ನೀಡುತ್ತದೆ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಆಗಸ್ಟ್ 30 ರಂದು ಯೋಜನೆಯನ್ನು ಹೊರತರಲು ಪ್ರಾರಂಭಿಸಿತು ಮತ್ತು ಹಣವನ್ನು ವರ್ಗಾಯಿಸುವಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿತು.