ಅಮೇರಿಕಾ : ಯುವತಿಯೋರ್ವಳನ್ನು ಕೊಲೆ ಮಾಡಿ ಆಕೆಯ ದೇಹದ ಹೃದಯವನ್ನು ಕತ್ತರಿಸಿ ಬಳಿಕ ಮನೆಯವರಿಗೆ ಅಡುಗೆ ಮಾಡಿ ಬಡಿಸಿದ ಘಟನೆ ದೂರದ ಅಮೇರಿಕಾದಲ್ಲಿ ನಡೆದಿದೆ.
ಕೊಲೆ ಮಾಡಿದ ನಂತರ ಆ ದೇಹವನ್ನು ಬಿಸಾಡುವ ಮೊದಲು ಆ ಶವವನ್ನು ಕತ್ತರಿಸಿ, ಅದರಲ್ಲಿರುವ ಹೃದಯವನ್ನು ಹೊರಗೆ ತೆಗೆದು, ಅದನ್ನು ಆಲೂಗಡ್ಡೆಯ ಜೊತೆ ಬೇಯಿಸಿ, ಮನೆಯವರಿಗೆ ಸಾಂಬಾರ್ ಮಾಡಿ ಬಡಿಸಿರುವ ವಿಚಿತ್ರ ಮತ್ತು ಭಯಾನಕ ಘಟನೆಯೊಂದು ಅಮೆರಿಕಾದ ವಾಷಿಂಗ್ಟನ್ ನಲ್ಲಿ ನಡೆದಿದೆ.ಆಕೆಯ ದೇಹದಿಂದ ಹೃದಯವನ್ನು ಕತ್ತರಿಸಿ, ಆಲೂಗಡ್ಡೆಯೊಂದಿಗೆ ಬೇಯಿಸಿ ಅಡುಗೆ ಮಾಡಿ ಕುಟುಂಬಿಕರಿಗೆ ಬಡಿಸಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದೆ.
ಮೃತ ಮಹಿಳೆಯ ಹೃದಯವನ್ನು ತನ್ನ ಚಿಕ್ಕಪ್ಪನ ಮನೆಗೆ ತಂದು ಅಲ್ಲಿ ಅದನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಚಿಕ್ಕಪ್ಪ ಮತ್ತು ಅವರ ಹೆಂಡತಿಗೆ ಬಡಿಸಿದ್ದಾನೆ ಎಂದು ತನಿಖಾಧಿಕಾರಿಗಳು ಚಿಕಾಶಾದ ಗ್ರೇಡಿ ಕೌಂಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಾದ ಬಳಿಕ ಆಂಡರ್ಸನ್ ಆ ಮನೆಯಲ್ಲಿದ್ದ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಮೊಮ್ಮಗಳನ್ನು ಕೂಡ ಕೊಂದಿದ್ದಾನೆ. ತನ್ನ ಚಿಕ್ಕಪ್ಪನಿಗೆ ಚಾಕುವಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿದ್ದಾನೆ ಎಂದು ವರದಿಯಾಗಿದೆ.