ಮಂಗಳೂರು : ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ವರ್ಷಂಪ್ರತಿಯಂತೆ ಆಚರಿಸುತ್ತಿರುವ ಕಾರ್ತಿಕ ದೀಪೋತ್ಸವದ ಉತ್ಸವವನ್ನು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವೆಂಬರ್ 27 ರ ಸೋಮವಾರದಂದು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಗ್ಗೆ 10.00ರಿಂದ ಕಾರ್ತಿಕ ಮಾಸದ ಹುಣ್ಣಿಮೆಯ ಈ ವಿಶೇಷ ದಿನದಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಿತು. ನಂತರ ಸಂಜೆ 6 ರಿಂದ ದೇವಳದಲ್ಲಿ ಶ್ರೀ ವೀರನಾರಾಯಣ ಭಜನಾ ಮಂಡಳಿ ಹಾಗೂ ಮಾತೃ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆದು, ಶ್ರೀ ಮಹಾಗಣಪತಿ ಹಾಗೂ ಶ್ರೀ ವೀರನಾರಾಯಣ ದೇವರಿಗೆ ರಂಗಪೂಜೆಯು ನಡೆಯಿತು. ತದನಂತರ ಭಕ್ತರಿಂದ ಸಾಮೂಹಿಕ ದೀಪಾರಾಧನೋತ್ಸವ ನಡೆದು ಶ್ರೀ ದೇವರ ವಿಶೇಷ ಬಲಿ ಉತ್ಸವ ನಡೆಯಿತು. ನಂತರ ಶ್ರೀದೇವರಿಗೆ ಮಹಾಪೂಜೆ ನಡೆದು. ಅನ್ನಸಂತರ್ಪಣೆ ಜರಗಿತು. ಈ ಸಂಧರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ , ಸೇವಾ ಸಮಿತಿ, ಮಹಿಳಾ ಮಂಡಳಿ, ಸೇವಾ ಟ್ರಸ್ಟ್, ಜೀರ್ಣೋದ್ದಾರ ಸಮಿತಿಯ ಪ್ರಮುಖರು ಹಾಗೂ ಸರ್ವ ಭಕ್ತಾಧಿಗಳು ಉಪಸ್ಥಿತರಿದ್ದರು.