ಬೆಂಗಳೂರು: ಹೊಸ ರೇಷನ್ ಕಾರ್ಡ್ ಗೆ ( Ration Card ) ಅರ್ಜಿ ಸಲ್ಲಿಸೋ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ ಡಿ.3ರಂದು ಅರ್ಜಿ ಸಲ್ಲಿಕೆಗೆ ಆಹಾರ ಇಲಾಖೆ ಅವಕಾಶ ನೀಡಿದೆ.



ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಆಹಾರ ಇಲಾಖೆಯು, ಹೊಸ ರೇಷನ್ ಕಾರ್ಡ್ ಗೆ ಡಿಸೆಂಬರ್.3ರಂದು ರಾಜ್ಯಾಧ್ಯಂತ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಅಂತ ಹೇಳಿದೆ.


ರೇಷನ್ ಕಾರ್ಡ್ ತಿದ್ದುಪಡಿಗಾಗಿ ನ.29ರ ಇಂದು ಹಾಗೂ ನವೆಂಬರ್.30ರ ನಾಳೆ ಎರಡು ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಇನ್ನೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದಕ್ಕೆ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. 6 ವರ್ಷದ ಒಳಗಿನ ಮಕ್ಕಳಿದ್ದರೇ ಜನನ ಪ್ರಮಾಣಪತ್ರವನ್ನು ಹೆಸರು ಸೇರ್ಪಡೆಗೆ ಬೇಕು. 6 ವರ್ಷ ಮೇಲ್ಪಟ್ಟವರಿಗೆ ಪ್ರಸಕ್ತ ಸಾಲಿನ ಜಾತಿ ಪ್ರಮಾಣಪತ್ರ ಅದು ಐದು ವರ್ಷಕ್ಕಿಂತ ಒಳಗೆ ಇರುವಂತ ದಾಖಲೆಗಳನ್ನು ನೀಡಬೇಕು ಎಂದಿದೆ.
ಹೊಸ BPL, APL ಕಾರ್ಡ್ ಗಳಿಗಾಗಿ ಡಿ.3ರಂದು ಅರ್ಜಿಯನ್ನು ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಸೇವಾ ಕೇಂದ್ರಗಳಿಗೆ ತೆರಳಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.