ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸುಖಾಂತ್ಯವಾಗಿದ್ದು, ರಕ್ಷಣಾ ಸಿಬ್ಬಂದಿ 41 ಕಾರ್ಮಿಕರನ್ನ ಸುರಕ್ಷಿತವಾಗಿ ಹೊರ ತಂದಿದ್ದಾರೆ. ಈ ಮೂಲಕ 17 ದಿನಗಳ ಕಾಲ ಹೋರಾಡಿ, ಕೊನೆಗೂ ಸಾವನ್ನ ಗೆದ್ದು ಕಾರ್ಮಿಕರು ಹೊರ ಬಂದಿದ್ದಾರೆ.
41 ಕಾರ್ಮಿಕರನ್ನು ಸ್ಥಳಾಂತರಿಸಲು ಹೆಲಿಕ್ಯಾಪ್ಟರ್, ಅಂಬುಲೆನ್ಸ್ಗಳನ್ನು, ತಾತ್ಕಲಿಕ ಆಸ್ಪತ್ರೆ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇನ್ನು ಕೊರೆವ ಕಾರ್ಯ ಪೂರ್ಣಗೊಂಡ ಬಳಿಕ ಎನ್ಡಿಆರ್ಎಫ್ ಸಿಬ್ಬಂದಿ ಸುರಂಗದೊಳಗೆ ಹೋಗಿ, ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಕರೆ ತರುತ್ತಿದ್ದು, ಈ ಕಾರ್ಯಚರಣೆ ಪೂರ್ಣಗೊಳ್ಳಲು ಕನಿಷ್ಠ 2-3 ಗಂಟೆ ಹಿಡಿಯಲಿದೆ.
ಸ್ಥಳಕ್ಕೆ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರ ಬಂಧುಗಳು ಆಗಮಿಸಿದ್ದಾರೆ.