Home ಉಡುಪಿ ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾಂತಾರ 2 ಮುಹೂರ್ತ

ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾಂತಾರ 2 ಮುಹೂರ್ತ

0

ಕುಂದಾಪುರ: ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕಾಂತಾರ 2 ಚಿತ್ರದ ಮುಹೂರ್ತಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇಂದು ಕುಂಬಾಷಿಯ ಅನೆಗುಡ್ಡೆ ದೇವಸ್ಥಾನದಲ್ಲಿ ಮುಹೂರ್ತ ನಡೆಯಲಿದ್ದು, ದೇವಸ್ಥಾನವನ್ನು ಹೂಗಳಿಂದ ಸಿಂಗರಿಸಲಾಗಿದೆ.


ಕಾಂತಾರ ಚಿತ್ರದ ಮೊದಲ ಅಧ್ಯಾಯ ಅಂದರೆ ಕಾಂತಾರ 2 ಚಿತ್ರಕ್ಕೆ ಇಂದು ಮುಹೂರ್ತ ನಡೆಯಲಿದೆ. ಅಲ್ಲದೆ ಇಂದು ಕಾಂತಾರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಲಿದೆ. ಈ ಹಿನ್ನಲೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರತಂಡ ವಿಶೇಷ ಪೂಜೆಯನ್ನ ಮಾಡಿಸಲಿದೆ. ಉದ್ಭವಮೂರ್ತಿ ವಿನಾಯಕ ದೇವರಿಗೆ ಮೂಡು ಗಣಪತಿ ಸೇವೆ, ತ್ರಿಕಾಲ ಸೇವೆ, ಅನ್ನದಾನ ನಡೆಯಲಿದೆ. ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು ಬಣ್ಣ ಬಣ್ಣದ ಹೂವಿನಿಂದ ಸಿಂಗಾರ ಮಾಡಲಾಗಿದೆ.

ಕಾಂತಾರ ಸಿನಿಮಾ ಟೀಮ್ ನಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಸಿನಿಮಾದ ಮುಹೂರ್ತದ ದಿನದಂದೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಫಸ್ಟ್ ಲುಕ್ ಗಾಗಿ ಮಾಡಿದ ಪೋಸ್ಟರ್ ನಲ್ಲಿ ಇದು ಬರಿ ಬೆಳಕಲ್ಲ, ದರ್ಶನ ಎಂದು ಟ್ಯಾಗ್ ಲೈನ್ ಕೊಡುವ ಮೂಲಕ ಕುತೂಹಲ ಮೂಡಿಸಿದ್ದಾರೆ ರಿಷಬ್ ಶೆಟ್ಟಿ.

LEAVE A REPLY

Please enter your comment!
Please enter your name here