Home ಕರಾವಳಿ ನವಂಬರ್ 25 ಹಾಗೂ 26 ರಂದು ಉರ್ವ ಮೈದಾನದಲ್ಲಿ ನಡೆಯಲಿದೆ “ರಾಪಟ ಕಪ್”

ನವಂಬರ್ 25 ಹಾಗೂ 26 ರಂದು ಉರ್ವ ಮೈದಾನದಲ್ಲಿ ನಡೆಯಲಿದೆ “ರಾಪಟ ಕಪ್”

0

ಮಂಗಳೂರು: ಅವಿಕಾ ಪ್ರೊಡಕ್ಷನ್ಸ್ ಹಾಗೂ ಮಾರುತಿ ಕನ್ಸ್ಟ್ರಕ್ಷನ್ಸ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಮಂಗಳೂರಿನ ಉರ್ವ ಮೈದಾನದಲ್ಲಿ ಆಯ್ದ ಇಪ್ಪತ್ತು ತಂಡಗಳ ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ “ರಾಪಾಟ ಕಪ್” ಇದೇ ಬರುವ ನವಂವರ್ 25 ಹಾಗೂ 26 ರಂದು ನಡೆಯಲಿದೆ.


ಇದೇ ಡಿಸೆಂಬರ್ 1 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ “ರಾಪಟ” ತುಳು ಸಿನಿಮಾದ ಪ್ರಚಾರದ ಭಾಗವಾಗಿ ಈ ಪಂದ್ಯಾಟ ನಡೆಯಲಿದ್ದು, ರಾಪಟ ತುಳು ಸಿನೆಮಾದ ಟ್ರೈಲರ್ ಬಿಡುಗಡೆಯಾಗಿ ಸಕ್ಕತ್ ಸದ್ದು ಮಾಡುತ್ತಿದೆ. ಚಿತ್ರಕ್ಕೆ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ರವರು ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದು ಅರ್ಜುನ್ ಕಾಪಿಕಾಡ್ ರವರು ನಿರ್ದೇಶನದ ಜವಾಬ್ದಾರಿಯನ್ನು ವಹಿಸಿದ್ದಾರೆ. ಇನ್ನುಳಿದಂತೆ ತುಳುನಾಡಿನ ಹಾಸ್ಯ ದಿಗ್ಗಜರು ನಟಿಸಿದ್ದು ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡ ಕೆಲಸ ಮಾಡಿದೆ.

LEAVE A REPLY

Please enter your comment!
Please enter your name here