ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ದ್ವೇಷ ರಾಜಕಾರಣ, ಎಟಿಎಂ ಸರ್ಕಾರ , ವರ್ಗಾವಣೆ ಡೀಲಿಂಗ್ ರಾಜಕೀಯ ನಡೆಸುತ್ತಿದೆ ಎಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಈಗ ರಾಜ್ಯ ಸರ್ಕಾರ ಎನ್ಇಪಿ ರದ್ದತಿ ಮೂಲಕ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ಹೊರಟಿದ್ದು , ಎನ್ಇಪಿ ರಾಜಕೀಯ ದಾಖಲೆ ಅಲ್ಲ ಹೊರತು ಶಿಕ್ಷಣ ತಜ್ಞರು ರೂಪಿಸಿರುವ ಅಮೂಲ್ಯವಾದ ನೀತಿ. ಕಾಂಗ್ರೆಸ್ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಹೊರಟಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಈಗಾಗಲೇ #NEPಬೇಕು, ಇದು ಸಮಸ್ತ ಭಾರತೀಯರ ಕೂಗು. NEP ಗಾಗಿ 1 ಕೋಟಿ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಿದ್ದು ನವೆಂಬರ್ 30 ರ ತನಕ ಈ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.


