Home ತಾಜಾ ಸುದ್ದಿ BIG BREAKING : ವಿಧಾನಸಭೆಯ ‘ವಿರೋಧ ಪಕ್ಷದ ನಾಯಕ’ನಾಗಿ ಆರ್ ಅಶೋಕ್ ಆಯ್ಕೆ

BIG BREAKING : ವಿಧಾನಸಭೆಯ ‘ವಿರೋಧ ಪಕ್ಷದ ನಾಯಕ’ನಾಗಿ ಆರ್ ಅಶೋಕ್ ಆಯ್ಕೆ

0

ಬೆಂಗಳೂರು : ವಿಪಕ್ಷ ನಾಯಕನ ಆಯ್ಕೆಗೆ ಕೇಂದ್ರದಿಂದ ಹೈಕಮಾಂಡ್ ವೀಕ್ಷಕರಾಗಿ ನಿರ್ಮಲ ಸೀತಾರಾಮನ್ ಹಾಗೂ ದುಶ್ಶಾಂತ್ ಕುಮಾರ್ ಅವರು ರಾಜ್ಯಕ್ಕೆ ಆಗಮಿಸಿ ವಿಪಕ್ಷ ನಾಯಕರ ಆಯ್ಕೆಗೆ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ಸಲುವಾಗಿ ಇಂದು ಬೆಂಗಳೂರಿನ ಐಟಿಸಿ ಹೋಟೆಲ್ ನಲ್ಲಿ ಬಿ ಎಲ್ ಪಿ ಸಭೆ ನಡೆಸಿದ್ದರು.


 

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ ವೈ ವಿಜೇಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಮಾಜಿ ಸಚಿವ ಆರ್ ಅಶೋಕ್ ಅವರನ್ನು ವಿಪಕ್ಷ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ್ ಆಯ್ಕೆ

ಆದರೆ ಇದರ ಮಧ್ಯೆ ಕೆಲವು ವಿಪಕ್ಷ ನಾಯಕರ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದು ಅದರಲ್ಲೂ ಪ್ರಮುಖವಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕದವರಿಗೆ ನೀಡಬೇಕು ಎಂದು ಬೆಳಿಗ್ಗೆ ಆಗ್ರಹಿಸಿದ್ದರು. ಅಲ್ಲದೆ ಬಿ ಎಲ್ ಪಿ ಸಭೆ ನಡೆಯುವ ಮುಂಚೆ ಅವರು ಸಭೆಯನ್ನು ಬಹಿಷ್ಕರಿಸಿ ಆಚೆ ತೆರಳಿರುವ ಸಂದರ್ಭ ಕೂಡ ನಡೆದಿತ್ತು ಈ ವೇಳೆ ಅವರಿಗೆ ರಮೇಶ್ ಜಾರಕಿಹೊಳಿ ಹಾಗೂ ಅರವಿಂದ್ ಬೆಲ್ಲದ ಕೂಡ ಸಾತ್ ನೀಡಿದರು.

ಇದೀಗ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಮಾಜಿ ಸಚಿವ ಆರ್ ಅಶೋಕ್ ಅವರನ್ನು ವಿಪಕ್ಷ ನಾಯಕರನ್ನಾಗಿ ನೇಮಕ ಮಾಡಿ ಅಂತಿಮಗೊಳಿಸಲಾಗಿದೆ. ಈ ಕುರಿತಂತೆ ಕೇಂದ್ರ ಹೈಕಮಾಂಡ್ ವೀಕ್ಷಕರಾಗಿ ಆಗಮಿಸಿದ ನಿರ್ಮಲಾ ಸೀತಾರಾಮನ್ ಹಾಗೂ ದುಶ್ಯಂತ ಕುಮಾರ್ ಅವರು ಆರ್.ಅಶೋಕ್ ಅವರ ಹೆಸರನ್ನು ಘೋಷಿಸಿದ್ದಾರೆ.

ಲಿಂಗಾಯತ ಸಮುದಾಯದವನ್ನು ಓಲೈಸಲು ಇದೀಗ ಬಿಜೆಪಿಯು ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದು, ಇದೀಗ ಒಕ್ಕಲಿಗರ ಸಮುದಾಯದವರನ್ನು ಸೆಳೆಯಲು ಮಾಜಿ ಸಚಿವ ಅಶೋಕ್ ಅವರನ್ನು ವಿಪಕ್ಷ ನಾಯಕನಾಗಿ ನೇಮಕ ಮಾಡಿದೆ. ಈ ಹಿನೆಲೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಜನರನ್ನು ಸೆಳೆಯುವ ತಂತ್ರ ಬಿಜೆಪಿಯದ್ದಾಗಿದೆ.

ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೆಂಗಳೂರಿನ ಐಟಿಸಿ ಹೋಟೆಲ್ ನಲ್ಲಿ ಸಭೆಗೂ ಮುನ್ನ ಆಗಮಿಸಿದ್ದರು. ಅವರ ಜೊತೆಗೆ ರಮೇಶ್ ಜಾರಕಿಹೊಳಿ ಹಾಗೂ ಅರವಿಂದ್ ಬೆಲ್ಲದ್ ಅವರು ಕೂಡ ಇದ್ದರು ವರಿಷ್ಠರು ಮಾಜಿ ಸಚಿವ ಆರ್ ಅಶೋಕ್ ಅವರ ಹೆಸರನ್ನು ವಿಪಕ್ಷ ನಾಯಕನ ಆಯ್ಕೆಗೆ ಪ್ರಸ್ತಾಪಿಸುತ್ತಿದ್ದಂತೆ ಯತ್ನಾಳ್ ಅವರು ಸಭೆಯಿಂದ ಹೊರ ನಡೆದರು. ಅವರ ಜೊತೆಗೆ ರಮೇಶ್ ಜಾರಕಿಹೊಳಿ ಹಾಗೂ ಅರವಿಂದ್ ಬೆಲ್ಲದ ಕೂಡ ಹೊರ ನಡೆದರು.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕ ಮಾಡಿದ್ದಕ್ಕೆ ಯತ್ನಾಳ್ ಅವರಲ್ಲಿ ಅಸಮಾಧಾನ ಇತ್ತು ವಿಜೇಂದ್ರ ನೇಮಕಾತಿಗೆ ಯತ್ನಾಳ್ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ ವಿಪಕ್ಷ ನಾಯಕ ವಿಚಾರದಲ್ಲಿ ಮತ್ತಷ್ಟು ವರಿಷ್ಠ ನಿರ್ಧಾರ ಯತ್ನಾಳ್ ಅವರಿಗೆ ಸಿಟ್ಟು ತಿಳಿಸಿದೆ ಹೈ ಕಮಾಂಡ್ ನಿರ್ಧಾರ ಒಪ್ಪದೇ ವೀಕ್ಷಕರೆ ಮುಂದೆ ಕಟು ಶಬ್ದಗಳ ಬಳಕೆ ಮಾಡಿ ಬಸನಗೌಡ ಪಾಟೀಲ್ ಯತ್ನಾಳ ಸಭೆಯಿಂದ ಹೊರ ನಡೆದಿದ್ದಾರೆ ಅವರ ಜೊತೆಗೆ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅರವಿಂದ್ ಬೆಲ್ಲದ ಕೂಡ ಹೊರ ನಡೆದರು.

LEAVE A REPLY

Please enter your comment!
Please enter your name here