ಉಡುಪಿ: ಕೆಲ ದಿನಗಳ ಹಿಂದೆ ಆಟೋ ಚಾಲಕನ ಮೇಲೆ ದೌರ್ಜನ್ಯ ನಡೆಸಿದ ಜಯಲಕ್ಷ್ಮಿ ಸಿಲ್ಕ್ಸ್ ಮಾಲಕನ ವಿರುದ್ದ ಇವತ್ತು ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೂ ಮುನ್ನ ಆಟೋ ಚಾಲಕರು ಮೆರವಣಿಗೆ ನಡೆಸಿದರು.ಆಟೋ ಚಾಲಕರು ಅಜ್ಹರಕಾಡು ,ಬ್ರಹ್ಮಗಿರಿ ಮೂಲಕ ಎಸ್ಪಿ ಕಚೇರಿಗೆ ಕಾಲ್ನಡಿಗೆಯಲ್ಲೇ ಸಾಗಿದರು.ಬಳಿಕ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಡ ಆಟೋ ಚಾಲಕನ ವಿರುದ್ಧ ನಡೆದ ದೌರ್ಜನ್ಯ ಖಂಡನೀಯ.ಇಂದೇ ಆಟೋ ಚಾಲಕರ ಮೇಲಿನ ದೌರ್ಜನ್ಯ ನಿಲ್ಲಬೇಕು.ಶ್ರೀಮಂತ ಬಟ್ಟೆ ಅಂಗಡಿ ಮಾಲಕನ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇವೇಳೆ ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಕಾರರು ಜಯಲಕ್ಷ್ಮಿ ಸಿಲ್ಕ್ಸ್ ಮಾಲಕನ ವಿರುದ್ಧ ಧಿಕ್ಕಾರ ಕೂಗಿದರು.