Home ತಾಜಾ ಸುದ್ದಿ ಜಾತಿ ನಿಂದನೆ ಆರೋಪ – ಬಿಗ್‌ ಬಾಸ್‌ ಸ್ಪರ್ಧಿ ತನಿಷಾ ವಿರುದ್ಧಎಫ್‌‌ಐಆರ್‌

ಜಾತಿ ನಿಂದನೆ ಆರೋಪ – ಬಿಗ್‌ ಬಾಸ್‌ ಸ್ಪರ್ಧಿ ತನಿಷಾ ವಿರುದ್ಧಎಫ್‌‌ಐಆರ್‌

0

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ನಲ್ಲಿ ಸ್ಪರ್ಧಿಯಾಗಿರುವ ನಟಿ ತನಿಷಾ ಕುಪ್ಪಂಡ ಅವರ ವಿರುದ್ಧ ಜಾತಿ ನಿಂದನೆ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.

ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಸ್ ಸಿ ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.

ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪಿಸಿ ಅವರು ದೂರು ನೀಡಿದ್ದಾರೆ. ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.

LEAVE A REPLY

Please enter your comment!
Please enter your name here