Home ಕರಾವಳಿ ಮಂಗಳೂರು: ನಗರದ 10–15 ಕಡೆಗಳಲ್ಲಿ ನಿಶಬ್ದ ವಲಯ ಘೋಷಣೆಗೆ ಸಿದ್ಧತೆ – ಪೊಲೀಸ್ ಕಮಿಷನರ್

ಮಂಗಳೂರು: ನಗರದ 10–15 ಕಡೆಗಳಲ್ಲಿ ನಿಶಬ್ದ ವಲಯ ಘೋಷಣೆಗೆ ಸಿದ್ಧತೆ – ಪೊಲೀಸ್ ಕಮಿಷನರ್

0

ಮಂಗಳೂರು: ನಗರದ ಪ್ರಮುಖ ಆಸ್ಪತ್ರೆಗಳು, ಶಾಲಾ – ಕಾಲೇಜು ಸೇರಿದಂತೆ ಕೆಲ ವಸತಿ ಪ್ರದೇಶಗಳನ್ನು ಗುರುತಿಸಿ ನಗರದ 10 –15 ಕಡೆಗಳಲ್ಲಿ ನಿಶಬ್ದ ವಲಯ ಘೋಷಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು. ಕಚೇರಿಯಲ್ಲಿ ಪೊಲೀಸ್ ಫೋನ್ – ಇನ್ ಕಾರ್ಯಕ್ರಮದಲ್ಲಿ ನಗರದ ನಾಗರಿಕರೊಬ್ಬರು, ಬಿಜೈನಲ್ಲಿ ಬಸ್‌ಗಳಿಂದ ಕರ್ಕಶ ಹಾರನ್‌ಗಳು ಕೇಳುತ್ತದೆ. ತಕ್ಷಣ ಕ್ರಮಕೈಗೊಳ್ಳಬೇಕು ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಪ್ರತಿಕ್ರಿಯಿಸಿ ಈಗಾಗಲೇ ಹಂಪನಕಟ್ಟೆಯ ಲೇಡಿಗೋಶನ್ ಆಸ್ಪತ್ರೆ ವ್ಯಾಪ್ತಿಯಲ್ಲಿ ಹಾರನ್ ರಹಿತ ವಲಯವನ್ನಾಗಿ ಘೋಷಿಸಲಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ ಎಂದರು. ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್‌ ರೈಲು ನಿಲ್ದಾಣಗಳಲ್ಲಿ ಆಟೋದಲ್ಲಿ ಪ್ರೀ ಪೇಯ್ಡ್‌ಗಿಂತ ಅಧಿಕ ಹಣ ವಿಧಿಸಲಾಗುತ್ತದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ನಗರದ ಕೆಲವು ಪ್ರಮುಖ ಹೊಟೇಲ್‍ಗಳಲ್ಲಿ ಏಜೆನ್ಸಿಗಳು ರಜಾದಿನಗಳ ಪ್ಯಾಕೇಜ್ ಎಂದು ಸದಸ್ಯತ್ವ ಮಾಡಿ ಹಣ ವಂಚನೆ ಮಾಡುತ್ತಿವೆ ಎಂದು ಕದ್ರಿಯ ನಿವಾಸಿಯೊಬ್ಬರು ತಿಳಿಸಿದರು. ಈ ಬಗ್ಗೆ ಕ್ರಮ ವಹಿಸುವಂತೆ ಕಮಿಷನರ್ ಕಿರಿಯ ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿರುವ ಪಾದಚಾರಿ ಮಾರ್ಗಗಳು ಅತಿಕ್ರಮಣವಾಗಿದ್ದು, ಕಾಲ್ನಡಿಗೆಯಲ್ಲಿ ಸಾಗುವವರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದರು. ಪಾದಚಾರಿ ಮಾರ್ಗ ಅತಿಕ್ರಮಣ ಆಗಿರುವ ಬಗ್ಗೆ ಅನೇಕ ದೂರುಗಳು ಬರುತ್ತಿದ್ದು, ಇನ್ನು 3–4 ದಿನಗಳಲ್ಲಿ ಮಹಾನಗರ ಪಾಲಿಕೆ ಸಹಕಾರದಲ್ಲಿ ‘ಪಾದಚಾರಿಗಳಿಗಾಗಿ ಫುಟ್‌ಪಾತ್’ ಅಭಿಯಾನ ಆರಂಭಿಸಲಾಗುವುದು ಎಂದು ಅನುಪಮ್ ಅಗರ್ವಾಲ್ ಹೇಳಿದರು.

LEAVE A REPLY

Please enter your comment!
Please enter your name here