Home ತಾಜಾ ಸುದ್ದಿ ವಾಹನ ಸವಾರರ ಗಮನಕ್ಕೆ : ‘HSRP’ ನಂಬರ್ ಪ್ಲೇಟ್ ಅಳವಡಿಸಲು ನ.17 ಕೊನೆಯ ದಿನ

ವಾಹನ ಸವಾರರ ಗಮನಕ್ಕೆ : ‘HSRP’ ನಂಬರ್ ಪ್ಲೇಟ್ ಅಳವಡಿಸಲು ನ.17 ಕೊನೆಯ ದಿನ

0
ಬೆಂಗಳೂರು : ವಾಹನ ಸವಾರರೇ ಗಮನಿಸಿ… ‘HSRP’ ನಂಬರ್ ಪ್ಲೇಟ್ ಅಳವಡಿಸಲು ನ.17 ಕೊನೆಯ ದಿನವಾಗಿದೆ.01 ಏಪ್ರಿಲ್ 2019ರ ನಂತರ ನೊಂದಣಿ ಮಾಡಿಕೊಂಡ ಎಲ್ಲಾ ವಿಧದ ವಾಹನಗಳಿಗೆ ನವೆಂಬರ್ 17ರ ಒಳಗಾಗಿ ಹೆಚ್‌ಎಸ್‌ಆರ್ಪಿ (ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಸ್) ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ.ವಾಹನ ಮಾಲೀಕರು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಪಡೆಯಲು ಕರ್ನಾಟಕ ಸಾರಿಗೆ ಇಲಾಖೆವೆಬ್ಸೈಟ್ https://transport.karnataka.gov.in ಅಥವಾ www.siam.in ಭೇಟಿ ನೀಡಿ, ವೆಬ್ಸೈಟ್ನಲ್ಲಿ ವಾಹನದ ಉತ್ಪಾದಕ ಕಂಪನಿ ಹಾಗೂ ಇತರೆ ಮೂಲಭೂತ ಮಾಹಿತಿಗಳನ್ನು ಭರ್ತಿ ಮಾಡಬೇಕು. ಹತ್ತಿರ ಡೀಲರ್ ಸ್ಥಳವನ್ನು ನಿಗದಿ ಮಾಡಿಕೊಂಡು, ಆನ್ಲೈನ್ ಮೂಲಕವೇ ಹಣ ಪಾವತಿಸಿಬೇಕು. ನಂತರ ವಾಹನ ಮಾಲೀಕರ ಮೊಬೈಲ್ ನಂಬರ್ಗೆ ಬರುವ ಒಟಿಪಿ ಮಾಹಿತಿ ನಮೂದಿಸಿ, ದಿನಾಂಕ ಹಾಗೂ ಸಮಯ ನಿಗದಿ ಮಾಡಿಕೊಂಡು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದು.ಸಾರಿಗೆ ಇಲಾಖೆಯಿಂದ ಗುರುತಿಸಿದ ಮೂಲ ವಾಹನ ಉತ್ಪಾದನಕ ಕಂಪನಿಗಳು ಹಾಗೂ ಅಧಿಕೃತ ವಾಹನ ಡೀಲರ್ಗಳು ಮಾತ್ರ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲು ಮಾನ್ಯತೆ ಹೊಂದಿರುತ್ತಾರೆ. ವಾಹನ ಮಾಲೀಕರು ವೈಬ್ಸೈಟ್ ಮೂಲಕವೇ ನೊಂದಣಿ ಮಾಡಿಕೊಂಡು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ವಾಹನಗಳಿಗೆ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here