Home ತಾಜಾ ಸುದ್ದಿ ಲೈಂಗಿಕ ಕಿರುಕುಳ ಆರೋಪ – ಹೈಸ್ಕೂಲ್ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಲೈಂಗಿಕ ಕಿರುಕುಳ ಆರೋಪ – ಹೈಸ್ಕೂಲ್ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

0

ಕುಂದಾಪುರ: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಪ್ರೌಢಶಾಲಾ ಶಿಕ್ಷಕನೊಬ್ಬನ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಿಜೂರು ಪ್ರೌಢ ಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ಎಂದು ಗುರುತಿಸಲಾಗಿದೆ. ಸೆಪ್ಟಂಬರ್ 26ರಂದು ವಿದ್ಯಾರ್ಥಿನಿ ಶಾಲೆಗೆ ಹೋಗಿ ಮನೆಗೆ ಬಂದವಳು ಮನೆಯವರೊಂದಿಗೆ ತಾನಿನ್ನು ಶಾಲೆಗೆ ಹೋಗುವುದಿಲ್ಲ ಎಂದಿದ್ದು, ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ಆರಂಭದಲ್ಲಿ ವಿದ್ಯಾರ್ಥಿನಿಯನ್ನು ಮನೆಯವರು ವಿಚಾರಿಸಿದಾಗ, ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿಯವರು ತನ್ನ ಕೊಠಡಿಗೆ ಕರೆಯಿಸಿಕೊಂಡು ಟ್ಯೂಷನ್‌ಗೆ ಯಾಕೆ ಹೋಗುತ್ತೀಯಾ? ನಾನು ಹೇಳಿ ಕೊಟ್ಟಷ್ಟು ಟ್ಯೂಷನ್‌ನಲ್ಲಿ ಹೇಳಿ ಕೊಡ್ತಾರಾ? ಅವರ ಮನೆಯ ಪಾತ್ರೆ ತೊಳೆಯಲಿಕ್ಕೆ ಹೋಗುವುದಾ ಎಂದು ಕೇಳಿದ್ದಲ್ಲದೇ ಅವಾಚ್ಯ ಪದಗಳನ್ನು ಬಳಸಿ ಅವಮಾನಿಸಿದ್ದಾರೆ ಎಂದಿದ್ದಾಳೆ. ರಾತ್ರಿ ಮತ್ತೆ ವಿಚಾರಿಸಿದಾಗ, ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ತನ್ನ ಮೈಕೈ ಗಲ್ಲ ಮುಟ್ಟಿ ಯಾರಿಗೂ ಹೇಳಬೇಡ. ನಿನಗೆ ನಾನು ಬೇಕಾ? ನಿನ್ನ ತಂದೆ ತಾಯಿ ಬೇಕಾ? ಎಂದು ಲೈಂಗಿಕ ಕಿರುಕುಳ ನೀಡಿರುವುದಾಗಿ ಮನೆಯವರಲ್ಲಿ ತಿಳಿಸಿದ್ದಾಳೆ. ಬಳಿಕ ಊರವರು ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಐಪಿಸಿ 1860ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


LEAVE A REPLY

Please enter your comment!
Please enter your name here