Home ಕರಾವಳಿ ಮಂಗಳೂರು: ನಿಷೇಧಿಕ ಡ್ರಗ್ ಎಂಡಿಎಂಎ ಮಾರಾಟ- ಕೇರಳದ ಇಬ್ಬರು ಡ್ರಗ್ ಪೆಡ್ಲರ್ ಅರೆಸ್ಟ್ – drug...

ಮಂಗಳೂರು: ನಿಷೇಧಿಕ ಡ್ರಗ್ ಎಂಡಿಎಂಎ ಮಾರಾಟ- ಕೇರಳದ ಇಬ್ಬರು ಡ್ರಗ್ ಪೆಡ್ಲರ್ ಅರೆಸ್ಟ್ – drug MDMA

0

ಮಂಗಳೂರು: ನಿಷೇಧಿಕ ಡ್ರಗ್ ಎಂಡಿಎಂಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಬಂಧಿತರನ್ನು 1.ಮುಸ್ತಫಾ(37) 2. ಶಂಶುದ್ದೀನ್ ಎ(38) ಎಂದು ಗುರುತಿಸಲಾಗಿದೆ. ಆರೋಪಿಗಳು ದಿನಾಂಕ 09-11-2023 ರಂದು ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ ಸಿ ರೋಡ್ ನ ರಾಷ್ಟ್ರೀಯ ಹೆದ್ದಾರಿ 66 ರ ಬಳಿಯಲ್ಲಿ ಮಾದಕವಸ್ತು ಎಂಡಿಎಂಎ ಅನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳಿಂದ 75 ಸಾವಿರ ರೂ ಮೌಲ್ಯದ 15 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.


LEAVE A REPLY

Please enter your comment!
Please enter your name here