ಬಂಟ್ವಾಳ: ದಾರಿಯ ವಿಚಾರವಾಗಿ ಮಾತನಾಡಲು ತೆರಳಿದ ಆರು ಮಂದಿ ಮಹಿಳೆಯರಿಗೆ ಮನೆಯಲ್ಲಿದ್ದ ಆರೋಪಿಗಳಾದ ತಾಯಿ-ಮಗಳು ಸೇರಿ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿದ ಘಟನೆ ಬಂಟ್ವಾಳ ಸಮೀಪದ ಅಜ್ಜಿಬೆಟ್ಟು ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ಸಮೀಪದ ಅಜ್ಜಿಬೆಟ್ಟು ನಿವಾಸಿ ಶ್ವೇತಾ (19) ಅವರು ಠಾಣೆಗೆ ದೂರು ನೀಡಿದ್ದು, ಭಾನುವಾರ ಬೆಳಿಗ್ಗೆ ದಾರಿಯ ವಿಚಾರವಾಗಿ, ಈ ಹಿಂದೆ ನಡೆದಿದ್ದ ತಕರಾರಿನ ಬಗ್ಗೆ ವಿಚಾರಿಸುವರೇ, ತನ್ನ ಸಂಬಂಧಿಕರಾದ ಸುಚಿತ್ರಾ, ಚೈತ್ರಾ, ಪವಿತ್ರಾ, ಸಂದ್ಯಾ, ಪ್ರತಿಮಾ ಎಂಬವರೊಂದಿಗೆ, ಪ್ರಕರಣದ ಆರೋಪಿತೆಯಾದ ಜಯಂತಿ ಅವರ ಮನೆಗೆ ತೆರಳಿದ್ದೆವು. ಈ ವೇಳೆ ಜಯಂತಿ ಅವರ ತಾಯಿ ಪ್ರೇಮಾ ಅವರು ಕೂಡಾ ಮನೆಯಲ್ಲಿದ್ದರು. ನಾವು ಪ್ರೇಮಾ ಹಾಗೂ ಜಯಂತಿ ಅವರಲ್ಲಿ ಈ ಹಿಂದೆ ದಾರಿಯಲ್ಲಿ ಹೋಗುವಾಗ ಬೈದಿರುವುದನ್ನು ಪ್ರಶ್ನಿಸುತ್ತಿದ್ದಂತೆ, ಪ್ರೇಮಾ ಹಾಗೂ ಜಯಂತಿ ಅವರು ನಮಗೆಲ್ಲರಿಗೂ ಅವ್ಯಾಚವಾಗಿ ಬೈದು, ಜಾತಿ ನಿಂದನೆ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 97/2023 ಕಲಂ:, 504, ಐಪಿಸಿ ಮತ್ತು 3(1)(r)(s) the SC and ST(Prevention of Atrocities) Amendment ACT , 2015 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.