Home ಕರಾವಳಿ ಮಂಗಳೂರು: ದೀಪಾವಳಿ ವೇಳೆ ರಾತ್ರಿ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಮಂಗಳೂರು: ದೀಪಾವಳಿ ವೇಳೆ ರಾತ್ರಿ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

0

ಮಂಗಳೂರು: ದೀಪಾವಳಿ, ತುಳಸಿಪೂಜೆ ಹಾಗೂ ಕ್ರಿಸ್ ಮಸ್ ಹಬ್ಬಗಳ ಸಂದರ್ಭ ಪಟಾಕಿಗಳ ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಬಗ್ಗೆ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಸಾರ್ವಜನಿಕರಲ್ಲಿ ಆದೇಶ ಮತ್ತು ನಿರ್ದೇಶನ ನೀಡಿದೆ. ಹೈಕೋರ್ಟ್ ಆದೇಶದಲ್ಲಿ ತಿಳಿಸಿದಂತೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಸಿರು ಪಟಾಕಿಗಳು ಮಾತ್ರ ಬಳಸಬೇಕೆಂದು ಮನಪಾ ಆದೇಶಿಸಿದೆ.


ಹೈಕೋರ್ಟ್ ಆದೇಶದಂತೆ ಹಬ್ಬಗಳ ಸಂದರ್ಭ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಉಳಿದ ವೇಳೆ ಪಟಾಕಿ ಸಿಡಿಸಬಾರದು. ಪಟಾಕಿಗಳನ್ನು ಸಿಡಿಸುವ ವೇಳೆ ಪ್ರಾಣಿ-ಪಕ್ಷಿ, ಮಕ್ಕಳು, ವೃದ್ಧರ ಬಗ್ಗೆ ಜಾಗ್ರತೆವಹಿಸಬೇಕು. ಯಾವುದೇ ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆ ಸುತ್ತಮುತ್ತಲಿನ ಹಾಗೂ ನಿಷೇಧಿತ ವಲಯದಲ್ಲಿ ಸುಡುಮದ್ದುಗಳನ್ನು ಸಿಡಿಸುವಂತಿಲ್ಲ ಹಾಗೂ ಮಾರಾಟ ಮಾಡಬಾರದು ಎಂದು ಮನಪಾ ಉಪಾಯುಕ್ತ ಸೂಚಿಸಿದ್ದಾರೆ. ಇನ್ನು ಹೈಕೋರ್ಟ್ ಆದೇಶದಂತೆ ಹಬ್ಬಗಳ ಸಂದರ್ಭ ಕಡ್ಡಾಯವಾಗಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನಷ್ಟೇ ಉಪಯೋಗಿಸಬೇಕು. ಈ ಹಸಿರು ಪಟಾಕಿ ಮತ್ತು ಪ್ಯಾಕೇಟ್‌ಗಳ ಮೇಲೆ ಹಸಿರು ಪಟಾಕಿ ಚಿಹ್ನೆ ಇರುತ್ತದೆ. ಜೊತೆಗೆ ಕ್ಯೂಆರ್‌ಕೋಡ್ ಕೂಡ ಇರುತ್ತದೆ ಅಂತಹ ಪಟಾಕಿಗಳನ್ನಷ್ಟೇ ಉಪಯೋಗಿಸಬೇಕು ಎಂದು ಮಹಾನಗರಪಾಲಿಕೆಯ ಉಪ ಆಯುಕ್ತರು(ಕಂದಾಯ) ಪ್ರಕಟಣೆಯಲ್ಲಿ ತಿಳಸಿದ್ದಾರೆ.

LEAVE A REPLY

Please enter your comment!
Please enter your name here