ಮಂಗಳೂರು: ಮಂಗಳೂರಿನ ಹೆಸರಾಂತ ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ ಇದೇ ನವಂಬರ್ 10 ಹಾಗೂ 11 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು ಸಾರ್ವಜನಿಕರು ಈ ಉಚಿತ ತಪಾಸಣೆಯ ಸದುವಯೋಗವನ್ನು ಪಡೆದುಕೊಳ್ಳಬೇಕೆಂದು ವೈದ್ಯರಾದ ಡಾ. ಕೇಶವ್ ರಾಜ್ ಅವರು ತಿಳಿಸಿದರು.



ಉಚಿತವಾಗಿ ರಕ್ತದೊತ್ತಡ ಪರೀಕ್ಷೆ, ರಕ್ತದ ಪರೀಕ್ಷೆ, ನಾಡಿ ಪರೀಕ್ಷೆ ಸೌಲಭ್ಯಗಳು ಲಭ್ಯವಿದ್ದು ಔಷಧಿ ಹಾಗೂ ಚಿಕಿತ್ಸೆಯ ಮೇಲೆ ಶೇಕಡ 5% ರಿಯಾಯಿತಿ ದೊರೆಯಲಿದೆ. ಅದಲ್ಲದೇ ಉಚಿತ BMD ಅಥವಾ ಮೂಳೆ ಖನಿಜ ಸಾಂದ್ರತೆಯ ಪರೀಕ್ಷೆಯ ಸೌಲಭ್ಯವೂ ಇದೆ. ಮುಖ್ಯವಾಗಿ 35 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಯೂ ನಿಯಮಿತ ಮಧ್ಯಂತರದಲ್ಲಿ BMD ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಈ ಆಸ್ಪತ್ರೆಯಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ, ಇಲ್ಲಿ ವಿಶೇಷವಾಗಿ ಒಳರೋಗಿ ಸೌಲಭ್ಯ , ಯೋಗ ಹಾಗೂ ಪ್ರಾಣಾಯಾಮದ ತರಗತಿ, ಆಹಾರ ಮತ್ತು ಪೌಷ್ಟಿಕಾಂಶದ ಸಮಾಲೋಚನೆ, ಮಾನಸಿಕ ಸಮಾಲೋಚನೆ, ವಿಶೇಷ ಪಂಚ ಕರ್ಮ ಚಿಕಿತ್ಸೆ , ಮಧುಮೇಹ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ ಸೇರಿ ಚರ್ಮಕ್ಕೆ ಸಂಭದಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

