ಕೊಚ್ಚಿ: ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಕೊಚ್ಚಿಯ ನೌಕಾ ವಾಯುನೆಲೆಯಲ್ಲಿ ಪರೀಕ್ಷಾರ್ಥ ಸಂಚಾರದ ವೇಳೆ ಅಪಘಾತಕ್ಕೀಡಾಗಿದೆ. ಓರ್ವ ಅಧಿಕಾರಿ ಹುತಾತ್ಮರಾಗಿದ್ದು, ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಐಎನ್ಎಸ್ ಚೇತಕ್ ಹೆಲಿಕಾಪ್ಟರ್ ನೌಕಾಪಡೆಯ ಅತ್ಯಂತ ಹಳೆಯ ಹೆಲಿಕಾಪ್ಟರ್ ಆಗಿದೆ.
ಕೊಚ್ಚಿಯ ದಕ್ಷಿಣ ನೌಕಾ ಕಮಾಂಡ್ನ ಪಕ್ಕದಲ್ಲಿರುವ ನೌಕಾ ವಾಯು ನಿಲ್ದಾಣವಾದ INS ಗರುಡದಿಂದ ಹೆಲಿಕಾಪ್ಟರ್ ಕಾರ್ಯನಿರ್ವಹಿಸಿದೆ ಎಂದು ಹೇಳಲಾಗ್ತಿದೆ.