Home ಕರಾವಳಿ ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

0

ಬಂಟ್ವಾಳ: ತಾಲೂಕಿನ  ಶಂಭೂರು ಎ.ಎಂ‌ಆರ್.ಡ್ಯಾಂ ನ ಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.


ನೇತ್ರಾವತಿ ನದಿಯಲ್ಲಿ ಶವವೊಂದು ತೇಲಾಡುವುದು ಕಂಡು ಬಂದಿದ್ದು, ಎ.ಎಂ‌.ಆರ್.ಡ್ಯಾಂ ನ ಕಾರ್ಮಿಕರು ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ನೀಡಿದ ಮಾಹಿತಿ ಪ್ರಕಾರ ಶವ ಸಂಪೂರ್ಣ ಕೊಳೆತು ಹೋಗಿದ್ದು ಸುಮಾರು 15 ದಿನಗಳ ಹಿಂದೆ ನದಿಗೆ ಬಿದ್ದಿರುವ ಬಗ್ಗೆ ಸಂಶಯವಿದೆ. ಮೃತ ವ್ಯಕ್ತಿ ಪುರುಷ ಅಥವಾ ಮಹಿಳೆಯಾ ಎಂಬುದನ್ನು ಗುರುತು ಹಿಡಿಯಲು ಅಸಾಧ್ಯವಾದ ಪರಿಸ್ಥಿತಿ ಇದ್ದು, ಕೈಯಲ್ಲಿ ಫ್ಯಾನ್ಸಿಯ ಬ್ರೈಸ್ ಲೈಟ್ ಒಂದು ಕಂಡು ಬಂದಿದೆ.
ಸದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಕಾಲು ಜಾರಿ ನದಿಗೆ ಬಿದ್ದಿದ್ದಾರಾ ಅಥವಾ ಬೇರೆ ಕಾರಣಗಳಿರಬಹುದಾ? ಎಂಬುದು ಶವದ ಗುರುತು ಪತ್ತೆ ಹಚ್ಚಿದ ಬಳಿಕ ಮಾತ್ರ ತಿಳಿಯಬಹುದು.
ಇದೀಗ ಶವವನ್ನು ಪೋಲೀಸರು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶೀಥಲೀಕರಣದಲ್ಲಿಡಲಾಗಿದ್ದು,ಶವದ ಗುರುತು ಪತ್ತೆ ಹಚ್ಚಲು ಬಂಟ್ವಾಳ ಆಸ್ಪತ್ರೆಗೆ ಹೋಗಬಹುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here