ಬೆಳ್ತಂಗಡಿ: ಕೌಟುಂಬಿಕ ವಿಚಾರದಲ್ಲಿ ದ್ವೇಷದಿಂದ ಸ್ವತಃ ಅಳಿಯನೇ ಮಾವನಿಗೆ ಸ್ಕೂಟರ್ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ ಘಟನೆ ಮಿತ್ತಬಾಗಿಲು ಗ್ರಾಮದ ಕಂಬಳದಡ್ಡ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ನಿವಾಸಿ ಕೆ.ಎಚ್.ಇಬ್ರಾಹೀಂ(60) ಎಂದು ಗುರುತಿಸಲಾಗಿದೆ. ಗಾಯಾಳು ಕೆಎಚ್ ಇಬ್ರಾಹಿಂ ಮಗಳ ಪತಿ ಮುಹಮ್ಮದ್ ಶಾಫಿ ಅಪಘಾತಗೊಳಿಸಿದ ಆರೋಪಿ, ಘಟನೆಯಲ್ಲಿ ಇಬ್ರಾಹೀಂ ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಇಬ್ರಾಹೀಂ ಅವರ ಪುತ್ರ ಮುಹಮ್ಮದ್ ರಫೀಕ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.


