ಮಂಗಳೂರು ದಸರಾ ಸಂಭ್ರಮದ ಪ್ರಯುಕ್ತ ಶ್ರೀಯುತ ಪ್ರಮೋದ್ ಕರ್ಕೇರ ಅವರ ನೇತೃತ್ವದಲ್ಲಿ ತುಳುನಾಡ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ, ಬಿರ್ದುದ ಪಿಲಿತ್ತ ಗತ್ತುದ ಅಜನೆ “ಪಿಲಿ ಅಜನೆ” ಕಾರ್ಯಕ್ರಮವು ಮಂಗಳೂರಿನ ಎಂ.ಜಿ ರೋಡ್, ದೀಪ ಕಂಫರ್ಟ್ಸ್ ಆವರಣದಲ್ಲಿ ನಡೆಯಿತು. ಪೂಜಾ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ಯಾಮ ರಾವ್ ಫೌಂಡೇಶನ್ ಮತ್ತು ಶ್ರೀನಿವಾಸ್ ಗ್ರೂಫ್ ಆಫ್ ಕಾಲೇಜ್ ಇದರ ಸೆಕ್ರೆಟರಿ ಆದ ಮಿತ್ರಾ ಎಸ್. ರಾವ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವ ಸಮೂಹ ತುಳುನಾಡ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಬಹಳ ಸಂತಸ ತಂದಿದೆ. ಪಿಲಿ ಅಜನೆ’ಯು ನಾಡಿನೆಲ್ಲೆಡೆ ವಿಜ್ರಂಭಿಸಲಿ ಎಂದು ಶುಭ ಹಾರೈಸಿದರು.
ಬಳಿಕ ಮಾತನಾಡಿದ, ಶಕ್ತಿನಗರದ ಶಕ್ತಿ ಎಜುಕೇಶನ್ ಟ್ರಸ್ಟ್ ನ ಚೀಫ್ ಅಡ್ವಾಯಿಸರ್ ರಮೇಶ್ ಕೆ. ಅವರು ಪ್ರಮೋದ್ ಅವರು ನಾಯಕತ್ವ ವಹಿಸಿ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಈಗ ಪಿಲಿ ಅಜನೆಯು ಕೂಡಾ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದರು. ಬಿಜೆಪಿ ಮುಖಂಡ, ಯುವ ನಾಯಕ ಬ್ರಿಜೇಶ್ ಚೌಟ ಮಾತನಾಡಿ, ಪಿಲಿ ಅಜನೆ ಮಂಗಳೂರು ದಸರಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ತುಳುನಾಡ ಸಂಸ್ಕೃತಿಯ ಉಳಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳ ಮುಖೇನ ಯುವ ಸಮುದಾಯ ಮುಂದಡಿಯಿಡಬೇಕು ಎಂದರು.
ವೇದಿಕೆಯಲ್ಲಿ ವೀಣಾ ರಾಬರ್ಟ್ ರೇಗೊ, ಪ್ರೇಮ್ ಸಾಲ್ಯಾನ್ ಬಿಜೈ, ಕಾರ್ತಿಕ್ ಅಮೀನ್ ಉಪಸ್ಥಿತರಿದ್ದರು. ಅತಿಥಿಗಳಿಗೆ ಭಗವದ್ಗೀತೆ ಪುಸ್ತಕ ನೀಡಿ ಗೌರವಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಭ್ರಾಮರಿ ಚೆಂಡೆ ಹಾಗೂ ಆಧ್ಯಾ ವಿಜಯನ್ ಅವರಿಂದ ವಾಯಲಿನ್ ವಾದನ ಗಮನ ಸೆಳೆಯಿತು. ಶಿವ ಫ್ರೆಂಡ್ಸ್ ಬರ್ಕೆ ತಂಡದ ಸಾಹಸಮಯ ಹುಲಿ ಕುಣಿತ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತು. ಕಾರ್ಯಕ್ರಮದ ರೂವಾರಿ ಪ್ರಮೋದ್ ಕರ್ಕೇರ, ಕಾರ್ತಿಕ್
ಹಾಗು ಪಿಲಿ ಅಜನೆಯ ತಂಡದ ಸರ್ವ ಸದಸ್ಯರು ,ಉಪಸ್ಥಿತರಿದ್ದರು. ದೀಪಕ್ ಅಡ್ಯಾರ್, ಸುರೇಶ್ ಶೆಟ್ಟಿ ಬರ್ಕೆ ಕಾರ್ಯಕ್ರಮ ನಿರೂಪಿಸಿದರು.