Home ತಾಜಾ ಸುದ್ದಿ ಹುಲಿ ಉಗುರು ಕೇಸ್: ನಟ ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ ಅರಣ್ಯ...

ಹುಲಿ ಉಗುರು ಕೇಸ್: ನಟ ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

0

ಬೆಂಗಳೂರು: ಸೆಲೆಬ್ರೆಟಿಗಳಿಗೆ ಈಗ ಹುಲಿ ಉಗುರು ಧರಿಸಿದ ಸಂಬಂಧ ಸಂಕಷ್ಟ ಎದುರಾಗಿದೆ. ಸಾಲು ಸಾಲು ನಟರ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ, ಅರಣ್ಯ ಇಲಾಖೆಯ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರೋದಲ್ಲದೇ, ಅವರ ನಿವಾಸದ ಮೇಲೆ ರೇಡ್ ಕೂಡ ಮಾಡಿ, ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಹೌದು ನಟ ಜಗ್ಗೇಶ್, ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಅವರು ಹುಲಿ ಉಗುರು ಧರಿಸಿದ ಸಂಬಂಧ ಅರಣ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಹುಲಿ ಉಗುರು ಧರಿಸಿದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿ ಮಾಹಿತಿಯನ್ನು ವಿಚಾರಣಾಧಿಕಾರಿಗಳ ಮುಂದೆ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಇನ್ನೂ ಇದಷ್ಟೇ ಅಲ್ಲದೇ ಮಲ್ಲೇಶ್ವರಂನಲ್ಲಿರುವಂತ ನಟ ಜಗ್ಗೇಶ್ ನಿವಾಸ, ಆರ್ ಆರ್ ನಗರದಲ್ಲಿರುವಂತ ನಟ ದರ್ಶನ್ ಮನೆ ಹಾಗೂ ಮಹಾಲಕ್ಷ್ಮೀ ಲೇಔಟ್ ನಲ್ಲಿ ಇರುವಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ನಿವಾಸದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಹುಲಿ ಉಗುರು ಧರಿಸಿದ್ದಂತ ನಟ ಜಗ್ಗೇಶ್, ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ನಿವಾಸದಲ್ಲಿ ಅದು ಅಸಲಿಯೋ ಅಥವಾ ನಕಲಿಯೋ ಅನ್ನೋ ಬಗ್ಗೆ ವಶಕ್ಕೆ ಪಡೆದು ಪರಿಶೀನೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here