Home ತಾಜಾ ಸುದ್ದಿ ‘ಗೃಹಲಕ್ಷ್ಮಿ’ ಯೋಜನೆ ಹಣ ಬಂದಿಲ್ಲ ಅನ್ನೋ ಚಿಂತೆಯಲ್ಲಿರೋ ‘ಯಜಮಾನಿ’ಯರಿಗೆ ಗುಡ್ ನ್ಯೂಸ್

‘ಗೃಹಲಕ್ಷ್ಮಿ’ ಯೋಜನೆ ಹಣ ಬಂದಿಲ್ಲ ಅನ್ನೋ ಚಿಂತೆಯಲ್ಲಿರೋ ‘ಯಜಮಾನಿ’ಯರಿಗೆ ಗುಡ್ ನ್ಯೂಸ್

0

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದೆ. ಇಂತಹ ಯೋಜನೆಗೆ ಈಗಾಗಲೇ ಚಾಲನೆ ದೊರೆತೆ ಎರಡು ತಿಂಗಳಿಂದ 2000 ಹಣ ಕೂಡ ಯಜಮಾನಿ ಮಹಿಳೆಯರ ಖಾತೆಗೆ ಜಮಾ ಆಗಿದೆ. ಆದ್ರೇ ಇನ್ನೂ ಕೆಲವರಿಗೆ ಹಣ ಜಮಾ ಆಗದೇ, ಯಾವಾಗ ಬರುತ್ತೋ ಅನ್ನೋ ಯೋಚನೆಯಲ್ಲಿದ್ದಾರೆ.


ಅಂತವರಿಗೆ ಗುಡ್ ನ್ಯೂಸ್ ಒಂದನ್ನ ಕಾಂಗ್ರೆಸ್ ಸರ್ಕಾರ ನೀಡಿದೆ. ಆ ಬಗ್ಗೆ ಮುಂದೆ ಓದಿ.

ಯಜಮಾನಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಸರ್ಕಾರದಿಂದ ಸಹಾಯ ಧನವಾಗಿ 2000 ಹಣವನ್ನು ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಈಗಾಗಲೇ ಆಗಸ್ಟ್, ಸೆಪ್ಟೆಂಬರ್ ತಿಂಗಳ 2000 ಹಣವನ್ನ ಜಮಾ ಮಾಡಲಾಗಿದೆ. ಅಕ್ಟೋಬರ್ ತಿಂಗಳ ಹಣವನ್ನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗಲಿದೆ.

ಈ ನಡುವೆ ಕೆಲವು ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಮಾತ್ರ ಗೃಹಲಕ್ಷ್ಮೀ ಯೋಜನೆ 2000 ಹಣ ಜಮಾ ಆಗಿಲ್ಲ. ಅದು ಯಾವಾಗ ಆಗಲಿದೆ ಅನ್ನೋದೇ ಹಲವು ಮಹಿಳೆಯರ ನಿರೀಕ್ಷೆಯಾಗಿದೆ.

ಈ ಕುರಿತಂತೆ ಇಂದು ಕಾಂಗ್ರೆಸ್ ಪಕ್ಷದಿಂದ ಟ್ವಿಟ್ ಮಾಡಲಾಗಿದ್ದು, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 86% ಮಹಿಳೆಯರು ಈಗಾಗಲೇ ನೋಂದಣಿ ಮಾಡಿಸಿ ₹2000 ಹಣ ಪಡೆಯುತ್ತಿದ್ದಾರೆ. ಇನ್ನುಳಿದವರ ಬ್ಯಾಂಕ್ ಖಾತೆಗಳ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಅಂತ ತಿಳಿಸಿದೆ. ಈ ಮೂಲಕ ಶೀಘ್ರವೇ ತಾಂತ್ರಿಕ ಸಮಸ್ಯೆ ನಿವಾರಣೆಯಾಗಿ ಗೃಹಲಕ್ಷ್ಮೀ ಹಣ ಜಮಾ ಆಗದೇ ಇರುವಂತ ಯಜಮಾನಿ ಮಹಿಳೆಯರ ಖಾತೆಗೆ 2000 ಹಣ ಜಮಾ ಆಗಲಿದೆ.

ಇನ್ನೂ ನಮ್ಮ ಸರ್ಕಾರದ ನೆರವಿನಿಂದ ಗೃಹಲಕ್ಷ್ಮಿಯರ ಮನೆಯಲ್ಲಿ ವಿಜಯದಶಮಿ ಸಂಭ್ರಮದಿಂದ ಕಳೆಗಟ್ಟಿದೆ. ಹೀನಾಯ ಸೋಲಿನಿಂದ ಕಾಣೆಯಾಗಿರುವುದು ಬಿಜೆಪಿಯವರ ನಿದ್ರೆ, ಸಂತೋಷವೇ ಹೊರತು ನಮ್ಮ ಸಚಿವರಲ್ಲ, ಅಂದಹಾಗೆ ಬಿಜೆಪಿ ಮುಖಂಡರ, ಕಾರ್ಯಕರ್ತರ ಮನೆಗೂ ಗೃಹಲಕ್ಷ್ಮಿ ಹಣ ಯಾವುದೇ ತೊಂದರೆ ಇಲ್ಲದೆ ತಲುಪಿದೆಯಲ್ಲವೇ ಅಂತ ಕೂಡ ಕಾಂಗ್ರೆಸ್ ಎಕ್ಸ್ ನಲ್ಲಿ ಪ್ರಶ್ನಿಸಿದೆ.

LEAVE A REPLY

Please enter your comment!
Please enter your name here