Home ತಾಜಾ ಸುದ್ದಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಫಿಕ್ಸ್‌, ಅಧಿಕೃತ ಘೋಷಣೆಯೊಂದೇ ಬಾಕಿ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಫಿಕ್ಸ್‌, ಅಧಿಕೃತ ಘೋಷಣೆಯೊಂದೇ ಬಾಕಿ

0

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಲಿ ಸಂಸದೆ ಮತ್ತು ಹಾಲಿ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಫಿಕ್ಸ್‌ ಆಗಿದ್ದು, ವಿಜಯ ದಶಮಿ ಹಬ್ಬದ ಬಳಿಕ ಈ ಹೆಸರನ್ನು ಹೈಕಮಾಂಡ್‌ ಘೋಷಣ ಮಾಡಲಿದ್ದಾರೆ ಎನ್ನಲಾಗಿದೆ. ಇದಲ್ಲದೇ ಸದ್ಯ ವಿ.ಪ ನಾಯಕನ ಸ್ಥಾನ ಕೂಡ ಖಾಲಿ ಉಳಿದಿದ್ದು, ಈಗಾಗಲೇ ರಾಜ್ಯ ಸರ್ಕಾರವು ಕೂಡ ವಿ.ಪ ನಾಯಕನ ಹೆಸರನ್ನು ತಿಳಿಸದೇ ಇರುವುದಕ್ಕೆ ಬಿಜೆಪಿ ವಿರುದ್ದ ವ್ಯಂಗ್ಯವಾಡುತ್ತಿದೆ.

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪ ನಾಯಕನ ಹೆಸರನ್ನು ಒಟ್ಟಿಗೆ ತಿಳಿಸಲಾಗುವುದು ಎನ್ನಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಆಯ್ಕೆಯಾದರೇ ಅವರು ಈ ಬಾರಿ ಸಂಸದ ಸ್ಥಾನದ ಚುನಾವಣೆಗೆ ನಿಲ್ಲುವುದಿಲ್ಲ ಎನ್ನಲಾಗತ್ತಿದ್ದು, ಉಡುಪಿ ಚಿಕ್ಕಮಗಳೂರಿನಿಂದ ಹೊಸಬರಿಗೆ ಸ್ಥಾನ ಕೊಡಲಿದ್ದಾರೆ ಎನ್ನಲಾಗಿದೆ. ಬಿಎಸ್‌ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿ ಬಗ್ಗೆ ಟೀಕೆಗಳು ಕೂಡ ಕೇಳಿ ಬಂದಿದ್ದು, ಅವರ ಆಯ್ಕೆಗೆ ಪಾರ್ಟಿಯಲ್ಲಿ ಅಸಮಾಧಾನ ಮೂಡುವುದು ಸುಳ್ಳಲ್ಲ ಅಂತ ಬಿಜೆಪಿ ನಾಯಕರೇ ಹೇಳುತ್ತಿದ್ದಾರಂತೆ. ಇದಲ್ಲದೇ ಸಂಘಟನೆಗೆ ಬಂದರೆ ಈಗೀರುವ ನಳೀನ್‌ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಇಬ್ಬರೂ ಕೂಡ ಹೇಳಿಕೊಳ್ಳುವ ರೀತಿಯಲ್ಲಿ ಪಾರ್ಟಿ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಲ್ಲವೂ ಕೂಡ ಬಿಎಸ್‌ವೈ ಹೆಸರಿನಲ್ಲಿ ಇಲ್ಲವೇ ಮೋದಿ ಹೆಸರಿನ ಮೇಲೆ ನಿರ್ಧಾರಿತವಾಗಿದೆ ಅಂತ ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಪಾರ್ಟಿ ಮುಖ್ಯಸ್ಥರಾಗಿ ಆಯ್ಕೆಯಾದರೇ ಅವರ ಮುಂದೆ ನೂರಾರು ಸವಾಲುಗಳು ಇದ್ದು ಅದನ್ನು ಯಾವ ರೀತಿಯಲ್ಲಿ ಬಗೆ ಹರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here