ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ಕೋರಮಂಗಲದಲ್ಲಿರುವ ಪಬ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು ಇದೆ ವೇಳೆ ಪಬ್ನ ಇನ್ನೊಂದು ಬದಿಯಲ್ಲಿ ಶಫ್ ಆಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಪ್ರೇಮ್ ಸಿಂಗ್ ಎನ್ನುವ ವ್ಯಕ್ತಿ ಜೀವ ಉಳಿಸಿಕೊಳ್ಳಲು ಪಬ್ನಿಂದ ಕೆಳಗೆ ಹಾರಿ ಗಾಯಗೊಂಡಿರುವ ಘಟನೆ ನಡೆದಿತ್ತು.
ಇದರಿಂದ ಎಚ್ಚೆತ್ತ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿನ ಬಾರ್ ರೆಸ್ಟೋರೆಂಟ್ ಗಳಲ್ಲಿ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದೆ.
ಮಳಿಗೆಗಳಲ್ಲಿ ಎಲ್ಲಾದರೂ ನ್ಯೂನ್ಯತೆ ಕಂಡು ಬಂದರೆ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ.
ಲೈಸನ್ಸ್ ನಿಯಮಾವಳಿ ಪಾಲಿಸದ ಉದ್ಯಮಿಗಳಿಗೆ ಬೀಗ ಹಾಕುವಂತಹ ಕೆಲಸ ಮಾಡುತ್ತಿದ್ದಾರೆ. ಒಟ್ಟು ಬಿಬಿಎಂ ವ್ಯಾಪ್ತಿಯಲ್ಲಿ 1,118 ಉದ್ಯಮಿಗಳಿಗೆ ಲೈಸೆನ್ಸ್ ಇದೆ.ಈ ಪೈಕಿ ಈಗಾಗಲೇ 250 ಉದ್ಯಮಿಗಳ ಪರಿಶೀಲನೆ ನಡೆಸಿದ್ದು, 86 ಮಳಿಗೆಗಳಿಗೆ ನೋಟಿಸ್ ನೀಡಿದ್ದಾರೆ ಈಗಾಗಲೇ 12 ಮಳಿಗೆಗಳು ಬಂದ್ ಆಗಿವೆ ಎಂದು ತಿಳಿದು ಬಂದಿದೆ.