ಮಂಗಳೂರು: ಈಗಾಗಲೇ ನಾಡಿನೆಲ್ಲೆಡೆ ದಸರಾ ಹಬ್ಬ ವಿಜೃಂಭಣೆಯಿಂದ ನಡೆಯುತ್ತಿದ್ದು ಮಂಗಳೂರಿನ ಮಂಗಳಾದೇವಿ ಜಾತ್ರಾ ವ್ಯಾಪಾರಸ್ಥರ ಹಿಂದೂಗಳ ಅಂಗಡಿಗಳಿಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರು ಕೇಸರಿ ಧ್ವಜಗಳನ್ನು ಅಳವಡಿಸಿದ ಬೆನ್ನಲ್ಲೇ ಕರ್ನಾಟಕ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘವು ಮಂಗಳಾದೇವಿ ಜಾತ್ರಾ ವ್ಯಾಪಾರಸ್ಥರಿಗೆ ಕೇಸರಿ ಶಲ್ಯವನ್ನು ವಿತರಿಸಿದರು ಹಾಗೆಯೇ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಬೇಕಾದ ಕಸದ ಚೀಲಗಳನ್ನು ನೀಡಿದರು.
ಜಾತ್ರಾ ವ್ಯಾಪಾರಿಗಳು ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವ್ಯಾಪಾರಗಳನ್ನು ತಮ್ಮ ಮಳಿಗೆಗಳಲ್ಲಿ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು, ಶುಚಿತ್ವಕ್ಕೆ ಆದ್ಯತೆ ನೀಡಬೇಕು ಹೀಗೆ ಹಲವು ನಿಯಮಗಳನ್ನು ಒಳಗೊಂಡ ಮನವಿ ಪತ್ರಗಳನ್ನು ವ್ಯಾಪಾರಿಗಳಿಗೆ ನೀಡಿದರು. ಈ ಸಂಧರ್ಭದಲ್ಲಿ ದ.ಕ ಘಟಕದ ಅಧ್ಯಕ್ಷರಾದ ಹಿರಣ್ಮಯಿ, ಗೌರವ ಅಧ್ಯಕ್ಷರಾದ ಮಹೇಶ್ ದಾಸ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.