ಪುತ್ತೂರು: ಕಡಬದಿಂದ ಆಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ವಿದ್ಯಾರ್ಥಿಗಳ ತಂಢವೊಂದು ಪುತ್ತೂರು ಶಾಸಕರಿಗೆ ಮನವಿ ಮಾಡಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು.
ವಿದ್ಯಾರ್ಥಿಗಳ ಸಂಕಷ್ಟವನ್ನು ಮನಗಂಡ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಈ ಮಾರ್ಗವಾಗಿ ಹೆಚ್ಚುವರಿ ಬಸ್ ಓಡಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು. ಶಾಸಕರ ಸೂಚನೆಯಂತೆ ಕಡಬ-ಅಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್ ಸಂಪರ್ಕಕ್ಕೆ ವಿದ್ಯಾರ್ಥಿಗಳಾದ ಝೈನುದ್ದೀನ್ ಅಲಂಕಾರು, ಹರಿಶ್ಚಂದ್ರ ಕೆ, ಚರಣ್ ಟಿ ಕೆ, ಮತ್ತು ಶ್ರವಣ್‌ರವರು ಮನವಿ ಮಾಡಿದ್ದರು.