Home ಕರಾವಳಿ ಬೆಳ್ತಂಗಡಿ: ಬಡವರ ಮನೆಯ ಕೆಡವಲು ಸಜ್ಜಾದ ಸರ್ಕಾರದ ವಿರುದ್ಧ ದ.ಕ ಜಿಲ್ಲಾ ಶಾಸಕರ ಪ್ರತಿಭಟನೆ

ಬೆಳ್ತಂಗಡಿ: ಬಡವರ ಮನೆಯ ಕೆಡವಲು ಸಜ್ಜಾದ ಸರ್ಕಾರದ ವಿರುದ್ಧ ದ.ಕ ಜಿಲ್ಲಾ ಶಾಸಕರ ಪ್ರತಿಭಟನೆ

0

ಬೆಳ್ತಂಗಡಿ ತಾಲೂಕಿನ ಕಳೆಂಜದ ದೇವಣ್ಣ ಗೌಡ ಅವರ ಮನೆ ಧ್ವಂಸಗೊಳಿಸಲು ಸಜ್ಜಾದ ಅರಣ್ಯ ಇಲಾಖೆ ಹಾಗೂ ರಾಜ್ಯದ ಬಡವರ ವಿರೋಧಿ ಸರ್ಕಾರದ ವಿರುದ್ಧ ದ.ಕ ಜಿಲ್ಲೆಯ ಶಾಸಕರು, ಕಾರ್ಯಕರ್ತರು ಸಹಿತ ಹಲವಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಿಂದಲೂ ಕೃಷಿ ಚಟುವಟಿಕೆಯೊಂದಿಗೆ ಸದರಿ ಭೂಮಿಯಲ್ಲಿ ವಾಸಿಸುತ್ತಿರುವ ಕುಟುಂಬವನ್ನು ಮುನ್ಸೂಚನೆಯೂ ನೀಡದೆ ದಬ್ಬಾಳಿಕೆಯೊಂದಿಗೆ ಒಕ್ಕಲೆಬ್ಬಿಸಲು ಸಂಚು ರೂಪಿಸಿರುವ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಜನರು ಈಗಾಗಲೇ ರೊಚ್ಚಿಗೆದ್ದಿದ್ದಾರೆ.

ಬಡವರೊಂದಿಗೆ ಸರ್ಕಾರ ಒರಟು ರೀತಿಯಲ್ಲಿ ನಡೆದುಕೊಂಡದ್ದೇ ಆದಲ್ಲಿ ಜನರ ಪ್ರತಿಕ್ರಿಯೆ ಯಾವ ರೂಪದಲ್ಲಿ ಇರಬಹುದು ಎಂಬುದು ಊಹಿಲಸಾಧ್ಯ. ಮುಂದಿನ ಎಲ್ಲಾ ಆಗುಹೋಗುಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here