Home ಕರಾವಳಿ ಬೆಳ್ತಂಗಡಿ : ಟೆಂಪೋ ಚಾಲಕನಿಗೆ ಹಲ್ಲೆ ಆರೋಪ – ದೂರು ದಾಖಲು

ಬೆಳ್ತಂಗಡಿ : ಟೆಂಪೋ ಚಾಲಕನಿಗೆ ಹಲ್ಲೆ ಆರೋಪ – ದೂರು ದಾಖಲು

0

ಬೆಳ್ತಂಗಡಿ : ಉಜಿರೆ ಮೀನು ಮಾರುಕಟ್ಟೆಯಲ್ಲಿ ಮೀನು ತರುವ ಟೆಂಪೋ ಕಾರಿಗೆ ಢಿಕ್ಕಿ ಹೊಡೆದ ಕಾರಣಕ್ಕೆ ಟೆಂಪೋ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಕುವೆಟ್ಟು ಗ್ರಾಮದ ಚಿಲಿಂಬಿ ನಿವಾಸಿ ಶೌಕತ್ ಅಲಿ (24) ಹಲ್ಲೆಗೆ ಒಳಗಾದವರು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಶೌಕತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಾನು ಟೆಂಪೊವನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಕಾರಿಗೆ ತಾಗಿದ್ದು ಇದನ್ನು ಪ್ರಶ್ನಿಸಿ ನಾಗೇಶ, ಪ್ರವೀಣ, ಹರಿ, ವಿನಯ್‌ ಹಾಗೂ ಇತರರು ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


LEAVE A REPLY

Please enter your comment!
Please enter your name here