ಪುತ್ತೂರು : ಬಿಜೆಪಿ ಕಾರ್ಯಕರ್ತನೊಬ್ಬ ಮಹಿಳೆ ಜೊತೆ ಇರುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿ ಕಾರ್ಯಕರ್ತರ ನವೀನ್ ರೈ ಕೈಕಾರ ಎಂಬವರು ಮಹಿಳೆಯೊಂದಿಗೆ ಇರುವ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿರೋ ನವೀನ್ ರೈ ಕೈಕಾರ ಮಹಿಳೆಯೊಂದಿಗೆ ರೂಂ ಒಂದರಲ್ಲಿ ಸೆಲ್ಫೀ ಫೋಟೊ ವೈರಲ್ ಆಗಿದೆ.
ಈ ಹಿನ್ನಲೆ ನವೀನ್ ರೈ ಕೈಕಾರ ಸೆನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ತನ್ನ ಫೋಟೋವನ್ನ ಬೇರೆ ಯುವತಿಯೊಬ್ಬಳ ಜತೆ ಇರುವಂತೆ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ ಪುತ್ತಿಲ ಪರಿವಾರ ಗ್ರೂಪಿನಲ್ಲಿ ನನ್ನ ಪೋಟೋ ಮತ್ತು ಬೆರೆ ಹುಡುಗಿಯ ಪೋಟೋವನ್ನು ಒಟ್ಟಿಗೆ ಸೇರಿಸಿ ನನ್ನ ಮಾನಕ್ಕೆ ಧಕ್ಕೆ ಬರುವಂತೆ ಮಾಡಿದ್ದು, ಫೋಟೋವನ್ನು ದಿನೇಶ್ ಪುತ್ತೂರು ಎಂಬವರು ಪುತ್ತಿಲ ಪರಿವಾರ -1ಎಂಬ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಮಾಡಿರುವುದಾಗಿ ದೂರು ದಾಖಲಿಸಿದ್ದು, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.