ಬೆಂಗಳೂರು: ಭಾನುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಹಿರಿಯ ನಾಗರಿಕಗರಿಗೆ ಪ್ರಸ್ತುತ 1,200 ರೂ. ವೃದ್ಧಾಪ್ಯ ವೇತನವನ್ನು ನೀಡುತ್ತಿದ್ದೇವೆ. ಅದನ್ನು ಮುಂದಿನ 2024-25ನೇ ಸಾಲಿನ ಬಜೆಟ್ನಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಂದು (ಅ.1) ಬೆಂಗಳೂರಿನಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಇಡೀ ಜಗತ್ತು ವಿಶ್ವ ಹಿರಿಯರ ದಿನಾಚರಣೆ ಮಾಡುತ್ತಿದ್ದೆವು. ನಮ್ಮ ಸರ್ಕಾರ ಸಹಾ ಹಿರಿಯ ನಾಗರಿಕರ ದಿನಾಚರಣೆ ಮಾಡ್ತಿದೆ. ನಾಡಿನ ಎಲ್ಲಾ ಹಿರಿಯ ನಾಗರಿಕರಿಕರಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಶುಭಾಶಯ ಕೊರುತ್ತೇನೆ. ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಇದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಮುಂದಿನ ಬಜೆಟ್ ನಲ್ಲಿ ವೃದ್ಧಾಪ್ಯದ ವೇತನ ಹೆಚ್ಚಳ ಮಾಡಿ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.