ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ) ಇದರ 2023/24 ಸಾಲಿನ ವಾರ್ಷಿಕ ಮಹಾಸಭೆ ನಾಳೆ ಬೆಳಗ್ಗೆ 10:00 ಗಂಟೆಗೆ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬೆದ್ರ ತಿಳಿಸಿದ್ದಾರೆ. ಹಾಗೆಯೇ ಸದಸ್ಯರ ನವೀಕರಣ (ರಿನೀವಲ್) ಪ್ರಕ್ರಿಯೆ ನಡೆಯಲಿದ್ದು ಸದಸ್ಯರು ಸಭೆಗೆ ಹಾಜರಾಗಿಯೇ ನವೀಕರಣ ಮಾಡಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು. ಹೊಸ ಸದಸ್ಯರಾಗಲು ಬಯಸುವವರು ಸೂಕ್ತ ದಾಖಲೆ ಹಾಗೂ ದೃಢೀಕರಣ ಪತ್ರದೊಂದಿಗೆ ಸದಸ್ಯತ್ವ ಪಡೆಯಬಹುದು ಎಂದು ಕಾರ್ಯದರ್ಶಿಗಳು ತಿಳಿಸಿದರು.