ಬೆಂಗಳೂರು: ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ವಂಚನೆ ಪ್ರಕರಣದಲ್ಲಿ ಲಾಕ್ ಆಗಿರುವಂತ ಚೈತ್ರಾ ಕುಂದಾಪುರ ಅವರು, ಉದ್ಯಮಿ ಗೋವಿಂದಬಾಬು ಪೂಜಾರಿ ವಿರುದ್ಧವೇ ಐಟಿ, ಇಡಿಗೆ ದೂರು ನೀಡಿರೋದಾಗಿ ತಿಳಿದು ಬಂದಿದೆ. ಈ ದೂರಿನಲ್ಲಿ ಮತ್ತೋರ್ವ ಶ್ರೀಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.
ಈಗಾಗಲೇ ಅಭಿನವ ಹಾಲಶ್ರೀಗಳು ಸಿಗಲಿ, ಎಂಎಲ್‌ಎ ಟಿಕೆಟ್ ಡೀಲ್ ಹಿಂದಿನ ಕಾರಣ ಏನು ಅಂತ ಮತ್ತಷ್ಟು ಮಾಹಿತಿ ಸಿಗಲಿದೆ ಅಂತ ಚೈತ್ರಾ ಕುಂದಾಪುರ ಸಿಸಿಬಿ ಬಂಧನದ ಬಳಿಕ ಸ್ಪೋಟಕ ಬಾಂಬ್ ಸಿಡಿಸಿದ್ದರು. ಈ ಬೆನ್ನಲ್ಲೇ ಈಗ ಮತ್ತೊಂದು ಹೆಸರು ರಿವೀಲ್ ಮಾಡಿದ್ದಾರೆ.
ಉದ್ಯಮಿ ಗೋವಿಂದಬಾಬು ಪೂಜಾರಿ ಎಂಎಲ್‌ಎ ಟಿಕೆಟ್ ಗಾಗಿ ಕೊಟ್ಟಿದ್ದಂತ 5 ಕೋಟಿ ರೂ ಹಣವನ್ನು ವಾಪಾಸ್ಸು ಕೇಳುತ್ತಿದ್ದಂತೆ, ಚೈತ್ರಾ ಕುಂದಾಪುರ ಆತನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನಿನಗೆ ಹಣ ಎಲ್ಲಿಂದ ಬಂತು. ನಿನ್ನ ವಿರುದ್ಧವೇ ಇಡಿ, ಐಟಿಗೆ ದೂರು ನೀಡುವುದಾಗಿ ಹೆದರಿಸಿದ್ದಾರೆ.
ಇದ್ಕಕೆ ಜಗ್ಗದೇ ಹಣ ಕೇಳಿದಂತ ಉದ್ಯಮಿ ಗೋವಿಂದಬಾಬು ಪೂಜಾರಿ ದೂರು ದಾಖಲಿಸುತ್ತಿದ್ದಂತೇ, ಚೈತ್ರಾ ಕುಂದಾಪುರ ಕೂಡ ಇಡಿ, ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅದರಲ್ಲಿ ಜುಲೈ.29ರಂದು ಮಧ್ಯಾಹ್ನ 12.43ಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಶ್ರೀಗಳು ಕರೆ ಮಾಡಿದ್ದರು. ಉದ್ಯಮಿ ಗೋವಿಂದಬಾಬು ಪೂಜಾರಿಗೆ ಎಂಎಲ್‌ಎ ಟಿಕೆಟ್ ನೀಡುವ ಸಂಬಂಧ ಮಾತನಾಡಿದ್ದರು ಅಂತ ಮತ್ತೋರ್ವ ಶ್ರೀಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ.