Home ಕರಾವಳಿ ಶೀಘ್ರದಲ್ಲೇ ಬಿರುವೆರ್ ಕುಡ್ಲದಿಂದ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ- ಉದಯ ಪೂಜಾರಿ

ಶೀಘ್ರದಲ್ಲೇ ಬಿರುವೆರ್ ಕುಡ್ಲದಿಂದ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ- ಉದಯ ಪೂಜಾರಿ

0

ಮಂಗಳೂರು: ಸೌಜನ್ಯಳಿಗೆ ನ್ಯಾಯ ಕೊಡಬೇಕು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕಳೆದ ಕೆಲವು ದಿನಗಳಿಂದ ನಡೆಯು ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ‘ಬಿರುವೆರ್ ಕುಡ್ಲ’ ಸಂಘಟನೆಯ
ಸ್ಥಾಪಕ ಉದಯ ಪೂಜಾರಿ ಮತ್ತು ಸದಸ್ಯರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ತಪ್ಪುಕಾಣಿಕೆ ಹಾಕಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬ ದೃಷ್ಟಿಯಿಂದ ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿದೆಯಾದರೂ ಕೆಲ ಪ್ರತಿಭಟನಾಕಾರರು ಶ್ರೀಕ್ಷೇತ್ರ ಧರ್ಮಸ್ಥಳವನ್ನು ಗುರಿಯಾಗಿಸಿ ಮಾತನಾಡುತ್ತಿದ್ದಾರೆ. ಇಂಥ ಪ್ರತಿಭಟನೆಯಿಂದ ಸೌಜನ್ಯಳಿಗೆ ನ್ಯಾಯ ಸಿಗುವುದಿಲ್ಲ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯ ಸಮಯದಲ್ಲಿಯೂ ಮಾನ್ಯ ನ್ಯಾಯಾಲಯ ಈ ವಿಷಯವನ್ನು ಸಷ್ಟಪಡಿಸಿದೆ.


ಸೌಜನ್ಯ ಮನೆಯವರು ಪ್ರಕರಣದ ಮರು ತನಿಖೆಗೆ ಅರ್ಜಿ ಸಲ್ಲಿಸಬೇಕೆಂದು ನಾವು ಬಯಸುತ್ತೇವೆ. ಈ ಮೂಲಕ ಪ್ರಕರಣ ಮರು ತನಿಖೆಯಾಗಿ ನಿಜವಾದ ಆರೋಪಿಗಳು ಯಾರೆಂದು ಸಮಾಜಕ್ಕೆ ಗೊತ್ತಾಗಬೇಕು.
ಸೌಜನ್ಯ ಪ್ರಕರಣದ ಹಿಂದ ಇರುವವರು ಯಾರೆಂದು ಗೊತ್ತಾಗಬೇಕು, ಈ ಮೂಲಕ ಆಕೆಗೆ ನ್ಯಾಯ ಸಿಗಬೇಕು ಎಂಬುದೇ ಬಿರುವೆರ್ಕುಡ್ಲ ಸಂಘಟನೆಯ ಉದ್ದೇಶವಾಗಿತ್ತು. ಇದೇ ಹಿತಾಸಕ್ತಿಯಿಂದಹೋರಾಟಕ್ಕೆ ಬೆಂಬಲ ಸೂಚಿಸಲಾಗಿತ್ತು. ಆದರೆ ಈಗ ನಡೆಯುತ್ತಿರುವ ಪ್ರತಿಭಟನೆಯ ಮೂಲ ಉದ್ದೇಶ ಬೇರೆಯೇ ಇದೆ ಎಂದು ಗೊತ್ತಾಗುತ್ತಿದೆ. ಧರ್ಮಸ್ಥಳದ ಪಾತ್ರವಿಲ್ಲದಿರುವಾಗ ಮತ್ತೆ ಮತ್ತೆ ಕೋಟ್ಯಂತರ ಹಿಂದೂಗಳ ಪ್ರದ್ಧಾ, ನಂಬಿಕೆಯ ಧಾರ್ಮಿಕ ಕೇಂದ್ರವನ್ನು, ಧರ್ಮಾಧಿಕಾರಿಯವರ ಕುಟುಂ ಬವನ್ನು ಎಳೆದು ತರುತ್ತಿರುವುದುನಿಜಕ್ಕೂ ಬೇಸರ ತರಿಸಿದೆ.
ಯಾವುದೇ ಸಾಕ್ಷಿ, ಆಧಾರಗಳು ಇಲ್ಲದೆ ಮತ್ತೆ ಮತ್ತೆ ಧರ್ಮಸ್ಥಳ ವನ್ನು ಗುರಿಯಾಗಿಸುತ್ತಿರುವುದರ ಉದ್ದೇಶ ಏನು ಎಂದು ಗೊತ್ತಾಗುತ್ತಿಲ್ಲ. ಮಾಧ್ಯಮಗಳ ಮೂಲಕ ಸೌಜನ್ಯ ಪ್ರಕರಣ ಹೆಸರಿನಲ್ಲಿ ನಡೆ ಯುತ್ತಿರುವ ಪ್ರತಿಭಟನೆಯ ಹಿಂದಿನ ಉದ್ದೇಶಗಳು ಬಹಿರಂಗ ವಾಗು ಸೌಜನ್ಯಳಿಗೆ ನ್ಯಾಯ ಸಿಗುವ ತನಕ ನಾವು ಹೋರಾಟ ನಡೆಸುತ್ತೇವೆ, ಆದರೆ ಈ ಹೋರಾಟದ ಹೆಸರಿನಲ್ಲಿ ಧರ್ಮಸ್ಥಳವನ್ನು, ಅಲ್ಲಿಯ ಧರ್ಮಾಧಿಕಾರಿಯವರ
ಬಗ್ಗೆ ಅಗೌರವದಿಂದ ಮಾತನಾಡರಾಗಿದೆ. ಹೀಗೆ ಮಾಡುವುದುನಿಲ್ಲಬೇಕು. ನಮ್ಮಿಂದ ಯಾವುದೇ ರೀತಿಯ ಅಪಚಾರ ಆಗಬಾರದು ಸತ್ಯ ಏನೆಂದು ಗೊತ್ತಾಗಬೇಕು ಎಂಬ ದೃಷ್ಟಿಯಿಂದ ಶೀಘ್ರದಲ್ಲೇ ನಾನು ಮತ್ತು ಸಂಘಟನೆಯ ಸದಸ್ಯರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ ಹಾಕಲಿದ್ದೇವೆ ಎಂದು ‘ಬಿರುವೆರ್ ಕುಡ್ಲ’ ಸಂಘಟನೆಯ ಉದಯ ಪೂಜಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here