ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಘಟನೆ ಭಾನುವಾರ ಸಂಜೆ ತಮಿಳುನಾಡಿನ ತಿರುಪ್ಪೂರ್ನಲ್ಲಿ ನಡೆದಿದೆ.
ವ್ಯಾಪಾರಿ ಸೆಂಥಿಲ್ ಕುಮಾರ್ ತನಗೆ ಸೇರಿದ ಖಾಲಿ ಜಾಗದಲ್ಲಿ ತಂಡವೊಂದು ಮದ್ಯ ಸೇವಿಸುತ್ತ ಕುಳಿತ್ತಿದ್ದನ್ನು ಕಂಡು ನೀವು ನನ್ನ ಜಾಗದಲ್ಲಿ ಇಂತಹ ಕೃತ್ಯ ಎಸಗುವುದು ಸರಿಯಲ್ಲ ಎಂದು ಹೇಳಿದ್ದಾರೆ. ಈ ವೇಳೆ ಸೆಂಥಿಲ್ ಕುಮಾರ್ ಮೇಲೆ ತಂಡದವರು ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾರೆ. ಅಡ್ಡಬಂದ ಸೆಂಥಿಲ್ ಕುಟುಂಬ ಸದಸ್ಯರನ್ನು ಕೂಡ ನಿರ್ದಯವಾಗಿ ತಂಡ ಕೊಚ್ಚಿಹಾಕಿದೆ. ಸೆಂಥಿಲ್ ಕುಮಾರ್ ಅಂಗಡಿಯಲ್ಲಿ ಕೆಲಸಕ್ಕಿದ್ದ ವೆಂಕಟೇಶನ್ ಮತ್ತು ಅವರ ಗ್ಯಾಂಗ್ ಈ ಕ್ರೂರ ಕೃತ್ಯದ ಹಿಂದೆ ಇದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.