ಕಾರ್ಕಳ: ಆನೆಕೆರೆ ಮಸೀದಿಯ ಬಳಿ ಇರುವ ಅಪಾಯಕಾರಿ ಬೃಹದಾಕಾರದ ಮರದ ಟೊಂಗೆಗಳನ್ನು ತರೆವುಗೊಳಿಸುವ ಕಾರ್ಯ ಅರಣ್ಯ ಇಲಾಖೆಯ ನೇತೃತ್ವದಲ್ಲಿ ನಡೆಯಿತು ಪ್ರತಿನಿತ್ಯ ನೂರಾರು ವಾಹನಗಳು ಮತ್ತು ಸಾವಿರಾರು ಮಂದಿ ನಾಗರಿಕರು ಸಂಚರಿಸುವ ರಸ್ತೆಯ ಪಕ್ಕದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಮರದ ಬಗ್ಗೆ ಸಾರ್ವಜನಿಕರ ಅನೇಕ ಮನವಿಗಳು ಪುರಸಭೆಗೆ ಮತ್ತು ಅರಣ್ಯ ಇಲಾಖೆಗೆ ಬಂದಿದ್ದವು, ಇಂದು ಅರಣ್ಯ ಇಲಾಖೆಯ ಮುತುವರ್ಜಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಕಾರ್ಮಿಕರು ತೆರವು ಭಾಗವಹಿಸಿದ್ದರು. ಮೆಸ್ಕಾಂ ಇಲಾಖೆಯ ಸಿಬಂದಿಗಳು ಮತ್ತು ಪುರಸಭಾ ಸದಸ್ಯ ಶುಭದರಾವ್ ಸಹಕರಿಸಿದರು.