ಕೊಪ್ಪಳ : ಧರ್ಮಕ್ಕೂ ಮೀರಿದಂತಹ ಘಟನೆಗಳು ನಡೆದರೆ ಆಶ್ಚರ್ಯ ಜೊತೆಗೆ ಹೆಮ್ಮೆಪಡುವಂತೆ ಮಾಡುತ್ತವೆ. ಅಂತಹ ಧರ್ಮಕ್ಕೂ ಮೀರಿದಂತಹ ಘಟನೆ ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಗ್ರಾಮದಲ್ಲಿ ನಡೆದಿದೆ.
ಹೌದು, ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಬ್ಬುಸಾಹೇಬ್ ವಿಕಲಚೇತನ ವ್ಯಕ್ತಿ ಕನಸಿನಲ್ಲಿ ಅಂಬಾದೇವಿ ಪ್ರತ್ಯಕ್ಷವಾಗಿದ್ದು, ಇದೀಗ ಅವರು ದರ್ಗಾದ ಪಕ್ಕದಲ್ಲಿ ದೇವಸ್ಥಾನವ ನಿರ್ಮಾಣ ಮಾಡಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.ಇದರಿಂದ ಗ್ರಾಮದಲ್ಲಿ ಭಾವೈಕ್ಯತೆ ಮೂಡಿ ಬಂದಿದೆ.
ಮೂಲತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಇವರು ಹುಟ್ಟಿನಿಂದ ವೀಕಲ ಚೇತನರಾಗಿದ್ದಾರೆ. ಹುಟ್ಟಿನಿಂದಲೇ ಹಿಂದೂ-ಮಸ್ಲಿಂ-ಕ್ರೈಸ್ತರೆಲ್ಲರೂ ಒಂದೇ ಎನ್ನುವ ಅಂಶವನ್ನು ಮೈಗೂಡಿಸಿಕೊಂಡು ಬೆಳೆದ ಇವರು, ಜೀವನ ಸಾಗಿಸುವ ಸಲುವಾಗಿ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಪಂಕ್ಚರ್ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಾರೆ. ಅದೊಂದು ದಿನ ಇವರ ಕನಸಿನಲ್ಲಿ ಅಂಬಾದೇವಿ ಬರ್ತಾಳಂತೆ. ಇದರಿಂದ ಮತ್ತಷ್ಟು ಭಾವೈಕ್ಯ ಮೂಡಿಸುವ ನಿಟ್ಟಿನಲ್ಲಿ ಅಬ್ಬುಸಾಹೇಬ ಅವರು ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಗ್ರಾಮದಲ್ಲಿ ಅಂಬಾದೇವಿ ಭಾವೈಕ್ಯದ ಆಶ್ರಯ ನಿರ್ಮಾಣವಾಗಿದೆ. 5 ತಿಂಗಳ ಹಿಂದೆ ಆಶ್ರಮದ ಭಕ್ತರೆಲ್ಲರೂ ಕೂಡಿ ದೇವಸ್ಥಾನವನ್ನು ಕಟ್ಟಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ದೇವಿ ಪೂಜೆ ಮಾಡುವ ಅಬ್ಬು ಸಾಹೇಬರು ದೇಶದಲ್ಲಿ ಭಾವೈಕ್ಯತೆ ಇನ್ನು ಹೆಚ್ಚಾಗಬೇಕು ಎಂದು ಆಶಿಸಿದ್ದಾರೆ.