Home ತಾಜಾ ಸುದ್ದಿ ‘ಪೋಸ್ಟ್ ಆಫೀಸ್’ನ ಈ ಯೋಜನೆಯಡಿ 10,000 ಠೇವಣಿ ಮಾಡಿದ್ರೆ, ನಿಮ್ಗೆ ಸಿಗುತ್ತೆ 16 ಲಕ್ಷ ಲಾಭ

‘ಪೋಸ್ಟ್ ಆಫೀಸ್’ನ ಈ ಯೋಜನೆಯಡಿ 10,000 ಠೇವಣಿ ಮಾಡಿದ್ರೆ, ನಿಮ್ಗೆ ಸಿಗುತ್ತೆ 16 ಲಕ್ಷ ಲಾಭ

0

ಅಂಚೆ ಕಚೇರಿಯು ಜನರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಹಣ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಸರಿಯಾದ ಆಯ್ಕೆಯಾಗಿದೆ. ಇದರಲ್ಲಿರುವ ಈ ಯೋಜನೆಯಲ್ಲಿ ಕೇವಲ 10 ಸಾವಿರ ರೂಪಾಯಿಗಳ ಈ ಹೂಡಿಕೆಯಲ್ಲಿ, ನೀವು ಮುಕ್ತಾಯದ ಮೇಲೆ ಹೆಚ್ಚಿನ ಲಾಭವನ್ನು ಪಡೆಯಬಹುದು


ಪೋಸ್ಟ್ ಆಫೀಸ್ ಆರ್ ಡಿ

ಪೋಸ್ಟ್ ಆಫೀಸ್ ಆರ್ ಡಿ (RD) ಒಂದು ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ಕಡಿಮೆ ಹೂಡಿಕೆಯ ಮೂಲಕವೂ ನೀವು ಯೋಜನೆಯ ಲಾಭವನ್ನು ಪಡೆಯಬಹುದು. ಇದರಲ್ಲಿ ಯೋಜನೆಯಲ್ಲಿ 100 ರೂಪಾಯಿಗಳಿಂದಲೂ ಹೂಡಿಕೆ ಮಾಡಬಹುದು, ಯಾವುದೇ ಹೂಡಿಕೆ ಮಿತಿಯಿಲ್ಲ. ಇದರಲ್ಲಿ 5 ವರ್ಷದಿಂದ 10 ವರ್ಷಗಳವರೆಗೆ ಹೂಡಿಕೆ ಮಾಡಬಹುದು.

ಆರ್‌ಡಿಯಲ್ಲಿ ಎಷ್ಟು ಬಡ್ಡಿ ಸಿಗುತ್ತೆ?

ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ನೀವು ತ್ರೈಮಾಸಿಕಕ್ಕೆ 5.8 ಪ್ರತಿಶತದಷ್ಟು ಬಡ್ಡಿಯನ್ನು ಪಡೆಯಬಹುದು.

10,000 ಹೂಡಿಕೆಗೆ 16 ಲಕ್ಷ ಲಭ್ಯ

ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ನೀವು 10,000 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ 10 ವರ್ಷಗಳ ನಂತರ ಮೆಚ್ಯೂರಿಟಿಯಲ್ಲಿ, ನೀವು ಶೇ. 5.8 ರ ಬಡ್ಡಿದರದ ಪ್ರಕಾರ 16 ಲಕ್ಷದ 28 ಸಾವಿರ, 963 ರೂಪಾಯಿಗಳನ್ನು ಪಡೆಯುತ್ತೀರಾ.

ಮುಂಗಡ ಠೇವಣಿ ಸೌಲಭ್ಯ

ಅಂಚೆ ಕಛೇರಿ ಆರ್‌ಡಿಯಲ್ಲಿ ಮುಂಗಡ ಠೇವಣಿ ಸೌಲಭ್ಯವಿದೆ. ನೀವು ಒಂದೇ ಬಾರಿಗೆ 12 ತಿಂಗಳವರೆಗೆ ಹಣವನ್ನು ಠೇವಣಿ ಮಾಡಬಹುದು.

LEAVE A REPLY

Please enter your comment!
Please enter your name here