Home ಕರಾವಳಿ ಕೇರಳದಿಂದ ಕರ್ನಾಟಕದಲ್ಲಿ ಶೌಚಾಲಯದ ತ್ಯಾಜ್ಯ ಸುರಿಯಲು ಯತ್ನ: ಲಾರಿ ಚಾಲಕನ ಬಂಧನ

ಕೇರಳದಿಂದ ಕರ್ನಾಟಕದಲ್ಲಿ ಶೌಚಾಲಯದ ತ್ಯಾಜ್ಯ ಸುರಿಯಲು ಯತ್ನ: ಲಾರಿ ಚಾಲಕನ ಬಂಧನ

0

ವಿಟ್ಲ: ಕೇರಳದ ಕಾಸರಗೋಡಿನಿಂದ ಶೌಚಾಲಯದ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯವನ್ನು ಕರ್ನಾಟಕ ವಾಹನ ಮೂಲಕ ಕರ್ನಾಟಕಕ್ಕೆ ತಂದು ನಿರ್ಜನ ಪ್ರದೇಶದಲ್ಲಿ ಸುರಿದು ಹೋಗುತ್ತಿರುವ ದಂಧೆಯನ್ನು ಕಲ್ಲಡ್ಕ ಕಾಂಞಂಗಾಡು ಹೆದ್ದಾರಿಯ ಉಕ್ಕುಡದಲ್ಲಿ ಸಾರ್ವಜನಿಕರು ಬುಧವಾರ ಪತ್ತೆ ಹಚ್ಚಿದ್ದಾರೆ.


ಕೆಲವೇ ದಿನಗಳ ಹಿಂದೆ ಕೇಪು ಗ್ರಾಮ ಚೆಲ್ಲಡ್ಕ ಅಮೈ ಮಾರ್ಗದ ಬದಿಯಲ್ಲಿ ಇದೇ ರೀತಿ ತ್ಯಾಜ್ಯವನ್ನು ಸುರಿಯುತ್ತಿದ್ದಾಗ ಸ್ಥಳೀಯರು ಪತ್ತೆ ಹಚ್ಚಿ, ಪಂಚಾಯತ್‌ ವಿಟ್ಲ ಠಾಣೆಗೆ ದೂರು ನೀಡಿದರು. ಆ ವಾಹನವನ್ನು ಬಿಡಿಸಿಕೊಂಡು ಬಂದು ಈಗ ಮತ್ತೆ ಕಾಸರಗೋಡು ಆಸ್ಪತ್ರೆಯಿಂದ ತ್ಯಾಜ್ಯವನ್ನು ತುಂಬಿ ಕರ್ನಾಟಕ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ವಾಹನವನ್ನು ಬೆನ್ನಟ್ಟಿ ಬಂದಿದ್ದಾರೆನ್ನಲಾಗಿದೆ. ಉಕ್ಕುಡದಲ್ಲಿ ವಾಹನವನ್ನು ಸಾರ್ವಜನಿಕರು ತಡೆಗಟ್ಟಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಶೌಚಾಲಯದ ತ್ಯಾಜ್ಯ ರಸ್ತೆಯುದ್ದಕ್ಕೂ ಸೋರಿಕೆಯಾಗಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ತ್ಯಾಜ್ಯವನ್ನು ತಂದಿರುವುದಾಗಿ ಚಾಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಇನ್ನು ಈ ಎಲ್ಲ ಬೆಳವಣಿಗೆಗೆ ವಿಟ್ಲ ಪೊಲೀಸರ ಕೈವಾಡ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here