Home ಸಿನೆಮಾ  ‘ಪೌರಕಾರ್ಮಿಕ’ನಿಗೆ ಕಾರು ಗುದ್ದಿಸಿದ ಪ್ರಕರಣ: ‘ನಟಿ ರಚಿತಾ ರಾಮ್’ ಕ್ಷಮೆಯಾಚನೆ

 ‘ಪೌರಕಾರ್ಮಿಕ’ನಿಗೆ ಕಾರು ಗುದ್ದಿಸಿದ ಪ್ರಕರಣ: ‘ನಟಿ ರಚಿತಾ ರಾಮ್’ ಕ್ಷಮೆಯಾಚನೆ

0

ಬೆಂಗಳೂರು: ನಿನ್ನೆ ಲಾಲ್ ಬಾಗ್ ನ ಫ್ಲವರ್ ಶೋಗೆ ತೆರಳಿದ್ದಂತ ನಟಿ ರಚಿತಾ ರಾಮ್ ಅವರ ಕಾರು, ಕಸ ಹಾಯುತ್ತಿದ್ದಂತ ಪೌರ ಕಾರ್ಮಿಕನಿಗೆ ಗುದ್ದಿತ್ತು. ಈ ವೇಳೆ ಸೌಜನ್ಯಕ್ಕೂ ಆತನ ಕ್ಷಮೆ ಕೇಳದೆ ಅಲ್ಲಿದ್ದ ತೆರಳಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ಬಳಿಕ ಎಚ್ಚೆತ್ತುಕೊಂತ ಅವರು, ಇದೀಗ ಪೌರ ಕಾರ್ಮಿಕನೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಲೇ ಕ್ಷಮೆಯಾಚಿಸಿದ್ದಾರೆ.


ಇಂದು ನಟಿ ರಚಿತಾ ರಾಮ್ ಅವರು ನಿನ್ನೆಯ ಕಾರು ಗುದ್ದಿದ ಘಟನೆ ಸಂಬಂಧ ಲಾಲ್ ಬಾಗ್ ನಲ್ಲಿ ಕೆಲಸ ಮಾಡುವಂತ ಪೌರ ಕಾರ್ಮಿಕ ರಂಗಪ್ಪ ಅವರನ್ನು ಜೊತೆಗೆ ಕೂರಿಸಿಕೊಂಡು ಕ್ಷಮೆಯಾಚಿಸಿರುವಂತ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಅವರು ಬಿಡುಗಡೆ ಮಾಡಿರುವಂತ ವೀಡಿಯೋದಲ್ಲಿ, ಹಾಯ್ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಇವತ್ತು ನಾನು ಫಸ್ಟ್ ಟೈಮ್ ಸ್ಪೆಷಲ್ ವ್ಯಕ್ತಿ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಅವರೇ ನಿನ್ನೆ ಲಾಲ್ ಬಾಗ್ ನಲ್ಲಿ ಒಂದು ಕಾರ್ಯಕ್ರಮಕ್ಕೆ ಹೋದಾಗ ಆಕಸ್ಮಿಕವಾಗಿ ಒಂದು ಘಟನೆ ನಡೆದಿತ್ತು. ನನ್ನ ಕಾರು ಈ ಪೌರಕಾರ್ಮಿಕರಿಗೆ ಟಚ್ ಆಗಿತ್ತು ಎಂದಿದ್ದಾರೆ.

ಈ ಒಂದು ಘಟನೆ ನಡೆದಾಗ ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಕಡೆಯಿಂದ ತಪ್ಪಾಗಿದೆ. ನನ್ನ ಡ್ರೈವರ್ ಕಡೆಯಿಂದ ತಪ್ಪಾಗಿದೆ. ನನ್ನ ಡ್ರೈವರ್ ಕೂಡ ಒಬ್ಬ ಕಾರ್ಮಿಕನೇ. ನನ್ನ ಕಡೆಯಿಂದ ಅಣ್ಣನಿಗೆ ಕ್ಷಮೆ ಕೇಳುವುದಕ್ಕೆ ಇಷ್ಟ ಪಡುತ್ತೀನಿ. ತಪ್ಪಾಯ್ತಣ್ಣ ಕ್ಷಮಿಸಿ ಎಂದು ಜೊತೆಗೆ ಪೌರ ಕಾರ್ಮಿಕನನ್ನು ಕೂರಿಸಿಕೊಂಡು ನಟಿ ರಚಿತಾ ರಾಮ್ ಕ್ಷಮೆಯಾಚಿಸಿದ್ದಾರೆ.

ನಿನ್ನೆ ಆಕಸ್ಮಿಕವಾಗಿ ನೀವು ಬಂದ್ರಿ, ಅಷ್ಟೇ ಆಕಸ್ಮಿಕವಾಗಿ ಆ ಘಟನೆ ನಡೆದಿದೆ. ದಯವಿಟ್ಟು ಕ್ಷಮೆ ಇರಲಿ. ಇದು ಉದ್ದೇಶಪೂರ್ವಕವಾಗಿ ಮಾಡಿದಂತ ತಪ್ಪಲ್ಲ. ಆಕಸ್ಮಿಕವಾಗಿ ನಡೆದಿರುವಂತ ಘಟನೆಯಾಗಿದೆ. ಮನಸಾರೆ ನನ್ನ ಹಾಗೂ ನನ್ನ ಡ್ರೈವರ್ ಕಡೆಯಿಂದ ಕ್ಷಮೆಯಿರಲಿ ಎಂಬುದಾಗಿ ಕ್ಷಮೆ ಕೇಳಿದ್ದಾರೆ.

ಈ ಘಟನೆಯಿಂದ ಕಾರ್ಮಿಕರಿಗೆ ಬೇಜಾರಾಗಿದ್ದರೇ ಕ್ಷಮಿಸಿ. ಇವತ್ತು ಸ್ವಾತಂತ್ರ್ಯ ದಿನಾಚರಣೆ. ಈ ಥರದ ಶುಭಾಶಯವನ್ನು ನನ್ನ ಕಡೆಯಿಂದ ಬಂದಿರಲಿಲ್ಲ ಎಂದರು.

LEAVE A REPLY

Please enter your comment!
Please enter your name here