Home ಕರಾವಳಿ ಪೋಕ್ಸೋ ಪ್ರಕರಣ ಆರೋಪಿ ನವಾಜ್ ಉಳ್ಳಾಲ ನಿರ್ದೋಷಿ ಎಂದ ನ್ಯಾಯಾಲಯ..!

ಪೋಕ್ಸೋ ಪ್ರಕರಣ ಆರೋಪಿ ನವಾಜ್ ಉಳ್ಳಾಲ ನಿರ್ದೋಷಿ ಎಂದ ನ್ಯಾಯಾಲಯ..!

0

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಉಳ್ಳಾಲದ ಸುಂದರೀಭಾಗ್ ನಿವಾಸಿ ನವಾಜ್ ಉಳ್ಳಾಲ ಎಂಬಾತನನ್ನು ಪೋಕ್ಸೋ ಕಾಯಿದೆ ಅಡಿ ಬಂಧಿಸಲಾಗಿತ್ತು
ಆರೋಪಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ತನಿಖೆ , ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ ಎಂದು ಪೋಲೀಸರು ಚಾರ್ಜ್’ಶೀಟನ್ನು ಮಂಗಳೂರಿನ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ( ಎಫ್.ಟಿ‌‌‌.ಎಸ್‌.ಸಿ -I ) ನ್ಯಾಯಾಲಯಕ್ಕೆ ಸಲ್ಲಿಸಿದ್ದರು.


ಈ ಕುರಿತಾದ ಆರೋಪಗಳಂತೆ ಸಾಕ್ಷಿ ವಿಚಾರಣೆ ನಡೆಸಿದ ಘನ ನ್ಯಾಯಾಲಯವು, ಸಾಕ್ಷಿ ವಿಚಾರಣೆ , ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಆರೋಪಿ ವಿರುದ್ದದ ಆರೋಪಗಳು ನಾಸಾಬೀತಾದ ಹಿನ್ನಲೆಯಲ್ಲಿ ಆರೋಪಿ ನವಾಜ್ ಉಳ್ಳಾಲ ನನ್ನು ಸದ್ರಿ ಪ್ರಕರಣದಿಂದ ಖುಲಾಸೆಗೊಳಿಸಿ ಬಿಡುಗಡೆ ಮಾಡಿರುತ್ತದೆ, ಆರೋಪಿ ಪರವಾಗಿ ಯುವ ನ್ಯಾಯವಾದಿ ಇಸ್ಮಾಯಿಲ್ ಶಾಫಿ ಬೈಕಂಪಾಡಿ ವಾದ ಮಂಡಿಸಿರುತ್ತಾರೆ.

LEAVE A REPLY

Please enter your comment!
Please enter your name here