ಮಂಗಳೂರು: ದೇಶದಲ್ಲೇ ಪ್ರಥಮ ಬಾರಿಗೆ ಒಂದೇ ದಿನ ಐದು ತಲೆಮಾರಿನ 5 ಸದಸ್ಯರಿಗೆ ಮಹಿಳಾ ಸಮ್ಮಾನ್ ಮಾಡುವ ಮೂಲಕ ಗಮನ ಸೆಳೆದಿದ್ದು, ಈ ಯೋಜನೆಯು ಮಂಗಳೂರಿನ ಕಿನ್ನಿಗೋಳಿಯಲ್ಲಿ ನಡೆದಿದೆ.
ಅಂಚೆ ಇಲಾಖೆ, ಮೂಲ್ಕಿ ಪ್ರೆಸ್ ಕ್ಲಬ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಇನರ್ ವೀಲ್ ಕ್ಲಬ್ ವತಿಯಿಂದ ನಡೆದ ಆದಾರ್ ತಿದ್ದುಪಡಿ ಕಾರ್ಯಕ್ರಮದಲ್ಲಿ ಈ ಯೋಜನೆ ನಡೆದಿದೆ.
ಐದು ತಲೆಮಾರುಗಳ 5 ಮಹಿಳಾ ಸದಸ್ಯರಿಗೆ ಅಂಚೆ ಕಚೇರಿಯ ಮಹಿಳಾ ಸಮ್ಮಾನ್ ಯೋಜನೆಯನ್ನು ಅಂಚೆ ಇಲಾಖೆ ಮಾಡಿ ದೇಶವೇ ತಿರುಗಿ ನೋಡುವಂತೆ ಮಾಡಿದೆ ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆದ ಅಂಚೆ ಇಲಾಖೆ, ಮೂಲ್ಕಿ ಪ್ರೆಸ್ ಕ್ಲಬ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಇನರ್ ವೀಲ್ ಕ್ಲಬ್ ವತಿಯಿಂದ ನಡೆದ ಆದಾರ್ ತಿದ್ದುಪಡಿ ಮತ್ತು ಅಂಚೆ ಇಲಾಖೆಯ ವಿವಿಧ ಯೋಜನೆಗಳ ನೋಂದಾಣಿ ಕಾರ್ಯಕ್ರಮದಲ್ಲಿ ಸುಮಾರು 400 ಮಂದಿ ಆಧಾರ್ ತಿದ್ದುಪಡಿ ಮಾಡಿದ್ದಾರೆ.
ಹಲವು ಮಂದಿ ಇಲಾಖೆಯ ಇನ್ನಿತರ ಯೋಜನೆಗಳನ್ನು ಪಡೆದಿದ್ದು, ಮಾತ್ರವಲ್ಲದೆ ದೇಶದಲ್ಲೇ ಮೊದಲ ಬಾರಿಗೆ 3 ವರ್ಷದ ಮಗುವಿನಿಂದ 102 ವರ್ಷದ ಅಜ್ಜಿಯವರೆಗೆ ಒಂದೇ ಕುಟುಂಬದ ಐದು ತಲೆಮಾರುಗಳ ಐದು ಮಹಿಳಾ ಸದಸ್ಯರನ್ನು ಉಚಿತ ಮಹಿಳಾ ಸಮ್ಮಾನ್ ಮಾಡಿ ಅಂಚೆ ಇಲಾಖೆ ಗೌರವಿಸಿದೆ.
ಒಂದೇ ದಿನ ಒಂದೇ ಕುಟುಂಬದ ಐವರನ್ನು ಅದರಲ್ಲೂ ಐದು ತಲೆಮಾರಿನವರಿಂದ ಖಾತೆ ಮಾಡಿಸಿದ್ದು ದೇಶದಲ್ಲೇ ಮೊದಲನೆಯದ್ದಾಗಿದೆ.
ಇದು ಒಂದು ವಿಶೇಷ ಕಾರ್ಯಕ್ರಮ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಸುಧಾಕರ ಮಲ್ಯ ಹೇಳಿದ್ದಾರೆ.