ಮಲಪ್ಪುರಂ: ಬಡ ಕುಟುಂಬದಿಂದ ಬಂದ ಕೇರಳದ 11 ಮಹಿಳೆಯರು 10 ಕೋಟಿ ರೂಪಾಯಿ ಮೌಲ್ಯದ ಲಾಟರಿ ಹಣ ಗೆದ್ದಿದ್ದಾರೆ. ಕುಟುಂಬದ ಏಕೈಕ ಸಂಪಾದನೆಯಾಗಿರುವ ಈ ಮಹಿಳೆಯರು 10 ಕೋಟಿ ರೂಪಾಯಿ ಜಾಕ್ ಪಾಟ್ ಪಡೆದಿದ್ದಾರೆ. ವಿಶೇಷವೆಂದರೆ ಲಾಟರಿ ಟಿಕೆಟ್ ಖರೀದಿಸುವಾಗ ಆಕೆಯ ಪರ್ಸ್ ನಲ್ಲಿ 25 ರೂಪಾಯಿ ಕೂಡ ಇರಲಿಲ್ಲ.
ಅವರಲ್ಲಿ ಒಬ್ಬರು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಸ್ನೇಹಿತರಿಂದ ಸ್ವಲ್ಪ ಹಣವನ್ನು ಸಾಲ ಪಡೆದಿದ್ದರು. ಮಲಪ್ಪುರಂನ ಪರಪ್ಪನಂಗಡಿ ಪುರಸಭೆ ವ್ಯಾಪ್ತಿಯ ಪೌರಕಾರ್ಮಿಕರಾದ ಈ 11 ಮಹಿಳೆಯರು ತಮ್ಮ ಕನಸಿನಲ್ಲೂ ಲಾಟರಿ ಗೆಲ್ಲುವ ಯೋಚನೆ ಮಾಡಿರಲಿಲ್ಲ. ಮಹಿಳೆಯರು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದು, ಅಲ್ಪ ಸಂಬಳವೇ ಅವರ ಕುಟುಂಬ ಜೀವನ ಸಾಗಿಸಲು ಸಾಕಾಗ್ತಿತ್ತು.
ಇವರಲ್ಲಿ ಒಬ್ಬರಾದ ರಾಧಾ ಮಾತನಾಡಿ, ಈ ಹಿಂದೆಯೂ ಹಣ ಹಾಕಿ ಲಾಟರಿ ಟಿಕೆಟ್ ಖರೀದಿಸಿದ್ದೇವೆ. ಆದರೆ, ಇದೇ ಮೊದಲು ಈ ಅದೃಷ್ಟ ಖುಲಾಯಿಸಿದೆ. ಆಗ ಯಾರೋ ಪಕ್ಕದ ಪಾಲಕ್ಕಾಡ್‌ನ ಟಿಕೆಟ್ ಸಂಖ್ಯೆಯನ್ನು ವಿಜೇತ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು. ನಮಗೆಲ್ಲ ನಿರಾಶೆಯಾಯಿತು. ಆದರೆ, ನಂತರ ನಮ್ಮ ಟಿಕೆಟ್‌ಗೆ ಮೊದಲ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿದಾಗ, ನಮ್ಮ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ನಾವೆಲ್ಲರೂ ನಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ಲಾಟರಿಯಲ್ಲಿ ಗೆದ್ದ ಹಣವು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.