ಮಂಗಳೂರು: ಜುಲೈ 23ರಂದು ಮಾಂಡೋವಿ ಮೋಟಾರ್ಸ್ ಹಂಪನಕಟ್ಟೆಯ ಶೋರೂಮ್ ನಲ್ಲಿ ” ಆಟಿದ ಕೂಟ” ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆ ತನಕ ಕಾರ್ಯಕ್ರಮ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಸುಮಾರು 30ಕ್ಕೂ ಅಧಿಕ ವಿಶೇಷ ಆಹಾರ ಮಳಿಗೆಗಳಲ್ಲಿ, ಹಲವಾರು ತಿಂಡಿ ತಿನಿಸುಗಳ ತಾಜಾ ಹಣ್ಣಿನ ಬಗೆ ಬಗೆಯ ಐಸ್ ಕ್ರೀಂಗಳು, ಹಲಸಿನ ಹೋಳಿಗೆ, ಸಾಂಪ್ರದಾಯಿಕ ಗೃಹ ತಯಾರಿಕೆಯ ಉತ್ಪನ್ನಗಳು ಉಭ್ಯವಿದ್ದು, ಸಾರ್ವಜನಿಕರು ಇದರ ವೀಕ್ಷಣೆಯನ್ನು ತಮ್ಮ ಕುಟುಂಬದ ಹಾಗೂ ಗೆಳೆಯರೊಂದಿಗೆ ಆಗಮಿಸಿ, ಆಟಿಯ ನಿಜವಾದ ಸೊಬಗನ್ನು ಅನುಭವಿಸಬೇಕೆಂದು ಮಾಂಡೋವಿ ಮೋಟಾರ್ಸ್ ಮನವಿ ಮಾಡಿದೆ.
ಇನ್ನು ಈ ಕಾರ್ಯಕ್ರಮ ಬೆಳಿಗ್ಗೆ 10ಗಂಟೆಗೆ ಪ್ರಾರಂಭಗೊಳಲಿದ್ದು, ಸಂಗೀತ್ ಬಹಾರ್ ಕಲಾವಿದರಿಂದ ಕರೋಕೆ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸರಿಯಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರ ಸಂಯೋಜನೆಯಲ್ಲಿ “ಅಂಗದ ಸಂಧಾನ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಹಾಗೂ ಬಳಗ, ಮತ್ತು ಮುಮ್ಮೆಳದಲ್ಲಿ ಕೆ. ಗೋವಿಂದ ಭಟ್ ಡಾ|| ಪ್ರಭಾಕರ್ ಝೋಶಿ ಹಾಗೂ ಜಬ್ಬಾರ್ ಸುಮೋ ಸಂಪಾಜೆ ಇತರ ಪ್ರಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮಾಂಡೋವಿ ಮೋಟಾರ್ಸ್ ನ ಡಿ.ಜಿ.ಎಂ ಶ್ರೀ ಶಶಿಧರ್ ಕಾರಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.