Home ತಾಜಾ ಸುದ್ದಿ ಮಗಳನ್ನು ವಿದೇಶಕ್ಕೆ ಕಳುಹಿಸಿ ಮನೆಗೆ ಹಿಂತಿರುಗುವಾಗ ಭೀಕರ ಕಾರು ಅಪಘಾತದಲ್ಲಿ ತಾಯಿ ದುರಂತ ಸಾವು

ಮಗಳನ್ನು ವಿದೇಶಕ್ಕೆ ಕಳುಹಿಸಿ ಮನೆಗೆ ಹಿಂತಿರುಗುವಾಗ ಭೀಕರ ಕಾರು ಅಪಘಾತದಲ್ಲಿ ತಾಯಿ ದುರಂತ ಸಾವು

0

ಹಾವೇರಿ: ಮಗಳನ್ನು ವಿದೇಶಕ್ಕೆ ಕಳುಹಿಸಿ ಮನೆಗೆ ಹಿಂತಿರುಗುವಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ತಾಯಿ ಮೃತಪಟ್ಟಿರುವ ದಾರುಣ ಘಟನೆ ರಾಣೇಬೆನ್ನೂರು ಬಳಿ ಇಂದು (ಜುಲೈ 19) ನಡೆದಿದೆ.


ಜಯಂತಿ (50) ಮೃತ ದುರ್ದೈವಿ. ಕಾರು ಚಾಲಕ ವಿಠ್ಠಲ್ (47) ಸಹ ಅಸುನೀಗಿದ್ದಾರೆ.

ಮೃತರು ಶಿರಸಿ ತಾಲೂಕಿನ ಹುಲೆಕಲ್ ಗ್ರಾಮದವರು. ಜಯಂತಿ ಅವರು ತಮ್ಮ ಮಗಳನ್ನು ದುಬೈ ಕಳುಹಿಸಲು ಬೆಂಗಳೂರಿನ ಏರ್ಪೋಟ್ಸ್​ ಬಂದಿದ್ದರು. ಮಗಳನ್ನು ವಿಮಾನವೇರಿಸಿ ಶಿರಸಿಗೆ ವಾಪಸ್ಸಾಗುತ್ತಿದ್ದರು. ರಾಣೇಬೆನ್ನೂರು ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.

ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಎ 27 ಎಂ 3669 ಸಂಖ್ಯೆಯ ಅಲ್ಟೋ ಕಾರಿನಲ್ಲಿ ಬೆಂಗಳೂರಿನಿಂದ ಶಿರಸಿಗೆ ಬರುವಾಗ ದುರ್ಘಟನೆ ಸಂಭವಿಸಿದೆ. ನಿರಂತರವಾಗಿ ಕಾರು ಚಾಲನೆ ಮಾಡಿರುವ ಹಿನ್ನೆಲೆ ನಿದ್ದೆ ಕಣ್ಣಿನಲ್ಲಿ ಕಾರಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

ಮಾಹಿತಿ ತಿಳಿದ ಕೂಡಲದೇ ಹಲಗೇರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here