ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕುಮೇರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು,ವಯಸ್ಕರು ಪರದಾಡುವ ಸ್ಥಿತಿ ಎದುರಾಗಿದೆ.
ಕುಮೇರು ವಾರ್ಡಿನಲ್ಲಿ ಸತತ 15 ವರ್ಷಗಳಿಂದಲೂ ಅದೇ ಸದಸ್ಯರು ಆರಿಸಿ ಬರುತಿದ್ದು, ಪ್ರಸ್ತುತ ಅಧ್ಯಕ್ಷರಾಗಿದ್ದು ಕೂಡ
ಹಲವಾರು ವರ್ಷಗಳಿಂದಲೂ ಬೇಡಿಕೆ ನೀಡುತ್ತಿದ್ದರೂ ಭರವಸೆ ಮಾತ್ರ ನೀಡುತ್ತಿದ್ದು, ಇದೀಗ ಮಳೆಗಾಲದಲ್ಲಿ ಎಲ್ಲ ವರ್ಷದ ಹಾಗೆ ಈ ವರ್ಷ ಕೂಡ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗಲು ರೋಗಿಗಳು, ಅದೇ ರೀತಿ ತಲಪಾಡಿ ಮಸೀದಿ ಸಂಬಂಧಿಸಿದ ಧಫನ ಭೂಮಿ ಇದೇ ಪರಿಸರದಲ್ಲಿ ಇರುವುದರಿಂದ ಶವವನ್ನು ಸಾಗಿಸಲು ಕೂಡ ಪರದಾಡುವಂತಾಗಿದೆ.
ಗ್ಯಾಸ್, ಕಸದ ವಾಹನ ರಸ್ತೆ ಇಲ್ಲದೆ ಬರದೇ ಅದಕ್ಕೂ ಕೂಡಾ ಪರದಾಡಬೇಕಾಗಿದೆ. ಸಂಭದಪಟ್ಟ ಸದಸ್ಯರು ಮತ್ತು ಅಧಿಕಾರಿಗಳು ಶೀಘ್ರವೇ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.