ಪುತ್ತೂರು: ಭಾರೀ ಮಳೆಗೆ ಮರ ಬಿದ್ದು ಸಂಪೂರ್ಣ ಹಾನಿಗೊಳಗಾಗಿದ್ದ ಮನೆಯನ್ನು ಶಾಸಕ ಅಶೋಕ್ ರೈ ಅಬಿಮಾನಿ ಬಳಗದವರು ೨೪ ಗಂಟೆಯೊಳಗೆ ದುರಸ್ಥಿ ಮಾಡಿಸಿದ್ದಾರೆ.
ಮುಂಡೂರು ಗ್ರಾಮದಸಿಂಹವನ ನಿವಾಸಿ ಮಲ್ಲು ಎಂಬವರ ಮನೆಯ ಅಂಗಳದಲ್ಲಿದ್ದ ಭಾರೀ ಗಾತ್ರದ ಮರವೊಂದು ಮುರಿದು ಬಿದ್ದು ಮಲ್ಲು ಅವರ ಸಿಮೆಂಟ್ ಶೀಟ್ ಆಳವಡಿಸಲಾಗಿದ್ದ ಮನೆ ಸಂಪೂರ್ಣ ಜಂಖಂಗೊಂಡಿತ್ತು. ಮನೆ ವಾಸ್ತವ್ಯಕ್ಕೆ ಅಯೋಗ್ಯವಾಗಿತ್ತು. ರಾತ್ರೋ ರಾತ್ರಿ ಮರವನ್ನು ಅಬಿಮಾನಿ ಬಳಗದವರು ತೆರವು ಮಡಿದ ಬಳಿಕ ಮನೆಯನ್ನು ದುರಸ್ಥಿಮಾಡಿಸಿದ್ದಾರೆ. ಘಟನ ಸ್ಥಳಕ್ಕೆ ಪುತ್ತೂರು ತಹಶಿಲ್ದಾರ್ ಶಿವಶಂಕರ್ ಸೇರಿದಂತೆ ಅದಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಮಳೆಗೆ ಮನೆ ಹಾನಿಯಾದರೆ ತಕ್ಷಣ ಮನೆಯನ್ನು ದುರಸ್ಥಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಶಾಸಕರು ಸೂಚನೆಯನ್ನು ನೀಡಿದ್ದು ಅದರಂತೆ ಅಬಿಮಾನಿ ಬಳಗದವರು ಮನೆಯನ್ನು ದುರಸ್ಥಿ ಮಾಡಿದ್ದಾರೆ. ತಂಡದಲ್ಲಿ ಸಿಂಹವನ ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ದೇವರಾಜ, ಆನಂದ ಸಿಂಹವನ, ಶಿವು ಸಿಂಹವನ, ರವಿ, ಪುಟ್ಟಪ್ಪ ನಾಯ್ಕ ಸುಂದರ ನಾಯ್ಕ ಮತ್ತಿತರರು ಮನೆ ದುರಸ್ಥಿ ಮಾಡುವಲ್ಲಿ ನೆರವಾದರು.