ಪುತ್ತೂರು :ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಒಂದಕ್ಕೊಂದು ಕೊಂಡಿಯಂತೆ ಕೆಲಸ ಮಾಡಿದಾಗ ಜನರಿಗೆ ಉತ್ತಮ ಸೇವೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಕರ್ತವ್ಯ ಮತ್ತು ಸೇವೆ ಜೊತೆಯಲ್ಲಿ ಹೋದಲ್ಲಿ ಮಾತ್ರ ಬಡವರಿಗೆ ನ್ಯಾಯ ಸಿಗುವ ಕೆಲಸ ಆಗುತ್ತದೆ. ಕರ್ತವ್ಯದ ಜೊತೆ ಸೇವಾ ಮನೋಭಾವ ಇರಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.
ಅವರು ಶನಿವಾರ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ನಡೆದ ಕಂದಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಂದಾಯ ದಿನಾಚರಣೆಗೆ ಉತ್ತಮ ಅರ್ಥವಿದೆ. ಭೂಮಿಯನ್ನು ರಕ್ಷಣೆ ಪೊಲೀಸ್ ಮಾಡಿದರೆ. ಅದರ ನಿರ್ವಹಣೆ ಕಂದಾಯದ ಮೇಲಿದೆ. ಇಲ್ಲಿ ಕರ್ತವ್ಯದ ಜೊತೆಗೆ ಸೇವಾ ಮನೋಭಾವನೆ ಇರಲಿ. ಬಡವರು ಬಂದರೆ ತಡ ಮಾಡದೆ ಸೇವೆ ನೀಡಿ. ಅಲ್ಲಿ ಕಾನೂನಿನ ಅಡಚಣೆ ಇದ್ದರೆ. ಅದಕ್ಕೆ ಪರಿಹಾರ ಬೇರೆ ರೀತಿಯಲ್ಲೂ ಇದೆ. ಜನಪರವಾಗಿ ನಾವು ಜನ ಸೇವೆ ಮಾಡಬೇಕು. ಅಧಿಕಾರಿಗಳ ಸ್ಪಂಧನೆ ಸಿಗದಿದ್ದಾಗ ಜನಪ್ರತಿನಿಧಿಗಳು ಏನು ಮಾಡಲು ಆಗುವುದಿಲ್ಲ. ನಾನು ಅಧಿಕಾರಿಗಳ ವಿರೋಧಿ ಅಲ್ಲ. ಅಧಿಕಾರಿಗಳು ನಮ್ಮ ಶಕ್ತಿ. ಕರ್ತವ್ಯ ಮತ್ತು ಸೇವೆ ಜೊತೆಯಲ್ಲಿ ಇರಲಿ ಎಂದ ಅವರು ಕಂದಾಯ ಇಲಾಖೆಯ ಹೊಸ ವರ್ಷದಲ್ಲಿ ಹಳೆ ಕಡತ ಯಾವುದು ಕೂಡಾ ಇಲ್ಲ ಎಂದು ಭಾವಿಸಿದ್ದೇನೆ. ಮುಂದಿನ ದಿನ ನಿಮ್ಮೆಲ್ಲರ ಸಹಕಾರ ಬೇಕೆಂದರು.